LATEST NEWS
ರೋಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ನೀಡಿ : SKSSF ಒತ್ತಾಯ
ಮಂಗಳೂರು, ಸೆಪ್ಟೆಂಬರ್ 15 : ರೋಹಿಂಗ್ಯಾ ಮುಸ್ಲಿಮರಿಗೆ ಭಾರತದಲ್ಲಿ ಆಶ್ರಯ ನೀಡಬೇಕು. ಇದು ಎಸ್ ಕೆ ಎಸ್ ಎಸ್ ಎಫ್ ಮುಖಂಡರ ಒತ್ತಾಯ. ಮಂಗಳೂರಿನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಎಸ್ ಕೆ ಎಸ್ಎಸ್ಎಫ್ ಸಂಘಟನೆ ಈ ಒತ್ತಾಯವನ್ನು ಮಾಡಿದೆ.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಸಭೆ ನಡೆಸಿದ ಎಸ್ ಕೆ ಎಸ್ಎಸ್ಎಫ್ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನೆರೆ ಬರ್ಮಾದಲ್ಲಿ ನರಹತ್ಯೆಗೆ ಬಲಿಯಾಗುತ್ತಿರುವ ರೋಹಿಂಗ್ಯಾ ಮುಸ್ಲಿಮರು ಆಶ್ರಯ ಕೋರಿ ಭಾರತದತ್ತ ನೋಡಿದರೆ ಭಾರತ ಅವರನ್ನು ಒದ್ದೋಡಿಸುತ್ತಿದೆ. ಇದು ಅಮಾನವೀಯವಾಗಿದೆ ಎಂದು ಕಿಡಿಕಾರಿದ್ದಾರೆ. ಆಶ್ರಯ ಅರಸಿ ಬಂದ ರೋಹಿಂಗ್ಯಾ ಮುಸ್ಲಿಮರನ್ನು ಭಾರತ ಹೊರ ಅಮಾನವೀಯವಾಗಿ ವರ್ತಿಸಿ ಹೊರದಬ್ಬುತ್ತಿರುವುದು ಪ್ಯಾಸಿವ್ ಸರ್ಕಾರದ ನೀತಿಯಾಗಿದೆ ಎಂದು ಆರೋಪಿಸಿದ್ದಾರೆ.
ರೋಹಿಂಗ್ಯಾ ದಲ್ಲಿ ಮುಸ್ಲಿಮರ ನರಹತ್ಯೆ ಎಗ್ಗಿಲ್ಲದೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಮಾನವೀಯತೆಯ ನೆಲೆಯಲ್ಲಿ ಹಿಂಸೆಯನ್ನು ಖಂಡಿಸುವುದರ ಬದಲು ಮೊದಿ ಸರ್ಕಾರ ಆಶ್ರಯ ಅರಸಿ ಬಂದವರನ್ನು ಒದ್ದೊಡಿಸುತ್ತಿರುವುದು ಖಂಡನೀಯ ಎಂದಿದ್ದಾರೆ.
ದೇಶಾದ್ಯಂತ ಮುಸ್ಲಿಂ ಸಮುದಾಯ ಹಾಗೂ ಜಾತ್ಯತೀತವಾದಿಗಳ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಗುಂಪು ದಾಳಿಗಳು ಮುಂದುವರೆಯುತ್ತಿದೆ ಎಂದು ದೂರಿದ ಪ್ರತಿಭಟನಾಕಾರರು ಭಾರತೀಯ ಮುಸ್ಲಿಮರ ಸ್ವಾತಂತ್ರ್ಯವನ್ನೂ ಕಸಿದು ಕೊಳ್ಳಲಾಗುತ್ತಿದೆ ಎಂದು ಗಂಭೀರಾ ಆರೋಪ ಮಾಡಿದ್ದಾರೆ.ತ್ರಿವಳಿ ತಲಾಕ್ ಕುರಿತು ಕಾನೂನು ತಯಾರಿಸುವ ಸಂದರ್ಭದಲ್ಲಿ ಮುಸ್ಲಿಂ ಪಂಡಿತರನ್ನು ಸೇರಿಸಿಕೊಳ್ಳಬೇಕು ಹಾಗೂ ಆಶ್ರಯ ಅರಿಸಿಕೊಂಡು ಬಂದ ರೋಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ನೀಡಬೇಕು. ಬರ್ಮಾದಲ್ಲಿ ನಡೆಯುತ್ತಿರುವ ನರಹತ್ಯೆಯನ್ನು ಭಾರತ ಪ್ರಬಲವಾಗಿ ಖಂಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.