BANTWAL
ಬಂಟ್ವಾಳ – ರೈಲ್ವೆ ಓವರ್ ಬ್ರಿಡ್ಜ್ ಅಡಿ ಸಿಕ್ಕಿಹಾಕಿಕೊಂಡ ರೋಡ್ ರೋಲರ್
ಬಂಟ್ವಾಳ ಫೆಬ್ರವರಿ 13 : ರೋಡ್ ರೋಲರ್ ವಾಹನವನ್ನು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಯೊಂದು ರೈಲ್ವೆ ಓವರ್ ಬ್ರಿಡ್ಜ್ ನ ಅಡಿಭಾಗದಲ್ಲಿ ಸಿಲುಕಿಕೊಂಡ ಘಟನೆ ಬಿಸಿರೋಡಿನ ಕೈಕಂಬ ಸಮೀಪದ ಮೊಡಂಕಾಪು ಎಂಬಲ್ಲಿ ನಡೆದಿದೆ.
ಬೆಂಜನಪದವು ಸೈಟ್ ನಿಂದ ಪುತ್ತೂರು ಸವಣೂರು ಎಂಬಲ್ಲಿ ನಡೆಯಲಿರುವ ಕಾಮಗಾರಿಗೆ ರೋಲರ್ ನ್ನು ಲಾರಿಯಲ್ಲಿ ತುಂಬಿಸಿ ಕೊಂಡು ಹೋಗುವ ವೇಳೆ ಮೊಡಂಕಾಪು ಎಂಬಲ್ಲಿ ರೈಲ್ವೆ ಯ ಅಡಿಭಾಗದಲ್ಲಿ ಕ್ರಾಸ್ ಮಾಡಲು ಸಾಧ್ಯವಾಗದೆ ಸಿಲುಕಿಕೊಂಡಿದೆ. ರೈಲ್ವೆಯ ಓವರ್ ಬ್ರಿಡ್ಜ್ ನ ಎತ್ತರಕ್ಕಿಂತ ಅಧಿಕ ಎತ್ತರದಲ್ಲಿ ಲಾರಿಯ ಲೋಡ್ ಮಾಡಿಕೊಂಡಿದ್ದೇ ಈ ಘಟನೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಘಟನೆಯಿಂದ ರೈಲ್ವೆ ಇಲಾಖೆ ಗೆ ಸೇರಿದ ಕಬ್ಬಿಣದ ರಾಡ್ ತುಂಡಾಗಿ ಲಾರಿಯ ಮೇಲೆ ಬಿದ್ದಿದೆ ಅದೃಷವಶಾತ್ ಬೇರೆ ಯಾವುದೇ ವಾಹನಗಳಮೇಲೆ ಬೀಳದೆ ಇದ್ದು, ಯಾವ ಅಪಾಯಕಾರಿ ಘಟನೆ ನಡೆದಿಲ್ಲ. ಸ್ಥಳಕ್ಕೆ ರೈಲ್ವೆ ಇಲಾಖೆಯವರು ಆಗಮಿಸಿದ್ದು, ಘಟನೆಯಿಂದ ಆಗಿರುವ ನಷ್ಟಕ್ಕೆ ಪರಿಹಾರದ ಬಗ್ಗೆ ಲಾರಿಯವರಲ್ಲಿ ಮಾತುಕತೆ ನಡೆಸುತ್ತಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಸಂಚಾರಕ್ಕೆ ಅಡಚಣೆಯಾಗಿದ್ದಯ,ಮೆಲ್ಕಾರ್ ಟ್ರಾಫಿಕ್ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಕ್ರೇನ್ ಬಳಸಿ ಲಾರಿಯನ್ನು ಬದಿಗೆ ಸರಿಸಿ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿದರು.