Connect with us

    LATEST NEWS

    ಉಡುಪಿಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರ ಸಾವು

    ಉಡುಪಿಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರ ಸಾವು

    ಉಡುಪಿ ಡಿಸೆಂಬರ್ 12: ಮಣಿಪಾಲದ ಆತ್ರಾಡಿಯ ಪರೀಕದ ಬಳಿ ಕಾರು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮೃತ ಯುವಕನನ್ನು ಪ್ರೀತೇಶ್ ಶೆಟ್ಟಿ(24) ಎಂದು ಗುರುತಿಸಲಾಗಿದೆ. ಪ್ರೀತೇಶ್ ಹೆರ್ಗ ಗ್ರಾಮದ ನಿವಾಸಿಯಾಗಿದ್ದು ಅಪಘಾತದಲ್ಲಿ ಗಾಯಗೊಂಡಿದ್ದ ಸ್ನೇಹಿತನ್ನು ನೋಡಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಬೈಕ್ ನಲ್ಲಿದ್ದ ಸಹಸವಾರ  ನಿಖಿತ್ (26)ಗಂಭೀರವಾಗಿ ಗಾಯಗೊಂಡಿದ್ದಾರೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇನ್ನೊಂದು ಪ್ರಕರಣದಲ್ಲಿ ಉಡುಪಿಯ ಪಾಂಗಾಳದ ಬಳಿ ರಸ್ತೆ ದಾಟುತ್ತಿದ್ದಾಗ ಶಿಪ್ಟ್ ಕಾರು ಡಿಕ್ಕಿ ಹೊಡೆದು ಸುಪ್ರಿಯಾ ಡೋಲಿ ಎನ್ನುವವರು ಸಾವನಪ್ಪಿದ್ದಾರೆ. ಸುಪ್ರಿಯಾ ಡೋಲಿ ಪಾಂಗಾಳ ನಿವಾಸಿಯಾಗಿದ್ದು ಉಡುಪಿಯಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ, ತೀವ್ರವಾಗಿ ಗಾಯಗೊಂಡ ಸುಪ್ರಿಯಾ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವನಪ್ಪಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply