Connect with us

    UDUPI

    ಕರಾವಳಿಯ ಮನೆಯ ತಾಜ್ಯ ಸದ್ಬಳಕೆಗೆ ರಾಮಬಾಣ “ಶಕ್ತಿಸುರಭಿ”

    ಕರಾವಳಿಯ ಮನೆಯ ತಾಜ್ಯ ಸದ್ಬಳಕೆಗೆ ರಾಮಬಾಣ “ಶಕ್ತಿಸುರಭಿ”

    ಉಡುಪಿ, ನವೆಂಬರ್ 12 : ಜೈವಿಕ ಇಂಧನ ಬಳಕೆ ಯೋಜನೆಯಡಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷವಾಗಿ ಪೋರ್ಟೆಬಲ್ ಹಾಗೂ ಸುಲಭ ಸ್ಥಾಪನೆ ಸಾಧ್ಯ ಜೈವಿಕ ಇಂಧನ ಸ್ಥಾವರ “ಶಕ್ತಿಸುರಭಿ” ಯನ್ನು ಪರಿಚಯಿಸಿದೆ.

    ಇದು ಇಲ್ಲಿನ ವಾತಾವರಣಕ್ಕೆ ಸೂಕ್ತವಾಗಿದೆ.

    ಮನೆಯ ತ್ಯಾಜ್ಯವನ್ನು ಸದ್ಬಳಕೆ ಮಾಡಲು ಇದರಿಂದ ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾ ಶ್ರೀನಿವಾಸ ರಾವ್ ಹೇಳಿದರು.

    ಜಿಲ್ಲಾ ಪಂಚಾಯತ್ ಡಾ. ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಸಭೆಯಲ್ಲಿ  ಅಧಿಕಾರಿಗಳು ಈ ಬಗ್ಗೆ ಮಾಡಿದರು.

    ಎಲ್ಲ ಪಂಚಾಯಿತಿಗಳಿಂದ ಫಲಾನುಭವಿಗಳ ಪಟ್ಟಿಯನ್ನು ಸಲ್ಲಿಸಿ ಎಂದ ಅವರು, ಈ ಯೋಜನೆ ಸೌಲಭ್ಯ ಪಡೆಯಲು ಎಲ್ಲರೂ ಅರ್ಹರಾಗಿದ್ದಾರೆ.

    ಜನರಿಗೆ ಜೈವಿಕ ಇಂಧನ ಬಳಕೆ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಮನೆಯ ತ್ಯಾಜ್ಯಕ್ಕೂ ಇದು ಪರಿಹಾರ ದೊರಕಿಸಿಕೊಡಲಿದೆ ಎಂದರು.

    ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ , 200 “ಶಕ್ತಿಸುರಬಿ”ü ಜೈವಿಕ ಇಂಧನ ಸ್ಥಾವರ ನಿರ್ಮಿಸುವ ಗುರಿಹೊಂದಿದ್ದು , 50% ಸಬ್ಸಿಡಿಯಲ್ಲಿ ನೀಡಲಾಗಿದೆ.

    ಜಿಲ್ಲಾ ಪಂಚಾಯತ್‍ನ ಅಧ್ಯಕ್ಷ ದಿನಕರಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಜನೋಪಯೋಗಿ ಯೋಜನಾ ಅನುಷ್ಠಾನ ಹಾಗೂ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.

    ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿಯಲ್ಲಿ ಕಾರ್ಕಳ ಗ್ರಾಮ ಪಂಚಾಯತಿಯಲ್ಲಿ 6 ಅರ್ಜಿ,ಕುಂದಾಪುರ 4 ಹಾಗೂ ಉಡುಪಿಯಲ್ಲಿ 2 ಅರ್ಜಿಗಳು ಬಂದಿವೆ.

    ಹೆಚ್ಚುವರಿ ಅರ್ಜಿಗಳಿದ್ದರೆ ಹತ್ತು ದಿನದೊಳಗಾಗಿ ಕಳುಹಿಸಲು; ಇಲ್ಲದಿದ್ದಲ್ಲಿ ಗ್ರಾಮ ಸಭೆಯಲ್ಲಿ ಮಾಹಿತಿ ನೀಡಿ ಬೇಡಿಕೆ ಇಲ್ಲ ಎಂಬ ಮಾಹಿತಿಯನ್ನು ಆದಷ್ಟು ಶೀಘ್ರ ನೀಡಿ ಎಂದು ಯೋಜನಾ ನಿರ್ದೇಶಕರಾದ ನಯನಾ ಅವರು ಕಾರ್ಯನಿರ್ವಹಣಾಧಿಕಾರಿಗಳಿಗೆ ಹೇಳಿದರು.

    ಬಸವ ವಸತಿ ಯೋಜನೆಯಡಿ 2016-17 ರಲ್ಲಿ 2493 ಗುರಿ ಹೊಂದಿದ್ದು, 346 ಈಗಾಗಲೇ ಪೂರ್ಣಗೊಂಡಿವೆ.

    ದೇವರಾಜ್ ಅರಸು ವಸತಿ ಯೋಜನೆಯಡಿ ಒಟ್ಟು 253 ಗುರಿ ಹೊಂದಿದ್ದು, 34 ಪೂರ್ಣಗೊಂಡಿದೆ.

    ಅದೇ ರೀತಿ ಅಂಬೇಡ್ಕರ್ ನಿವಾಸ್ ಯೋಜನೆಯಡಿ ಕ್ರಮವಾಗಿ 475 ಹಾಗು 525 ಗುರಿ ಹೊಂದಿದ್ದು, 102 ಮತ್ತು 74 ಮನೆಗಳು ಸಂರ್ಪೂಣಗೊಂಡಿವೆ ಎಂಬ ಮಾಹಿತಿಯನ್ನು ಅವರು ಸಭೆಗೆ ನೀಡಿದರು.

    ಜಿಲ್ಲೆಯಲ್ಲಿ ಅಂಗನವಾಡಿ ಕಟ್ಟಡಗಳ ಬೇಡಿಕೆ ಹಾಗೂ ಪ್ರಗತಿಯ ಬಗ್ಗೆ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಗ್ರೇಸಿ ಗೊನ್ಸಾಲ್ವಿಸ್ ಅವರು, ಈಗಾಗಲೇ ಏಳು ಅಂಗನವಾಡಿಗಳಲ್ಲಿ 5 ಅಂಗನವಾಡಿಗಳು ಸಂಪೂರ್ಣಗೊಂಡಿದ್ದು, ಎರಡನ್ನು ಶೀಘ್ರವೇ ಪೂರ್ಣ ಗೊಳಿಸುವುದಾಗಿ ನುಡಿದರು.

    ಮಲ್ಪೆಯಲ್ಲಿ ಎಎನ್‍ಎಂ ಸೆಂಟರ್ ಮುಚ್ಚಿರುವುದರಿಂದ ರೋಗಿಗಳು ಉದ್ಯಾವರಕ್ಕೆ ಬರುತ್ತಿರುವ ಬಗ್ಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಸಭೆಯ ಗಮನಸೆಳೆದರು.

    ಈ ಕುರಿತು ಉತ್ತರಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ರೋಹಿಣಿ ಅವರು, ಹತ್ತಿರದ ಉಪಕೇಂದ್ರದಿಂದ ಎಎನ್‍ಎಂ ಅವರನ್ನು ನಿಯೋಜಿಸಲಾಗಿದೆ ಎಂಬ ಮಾಹಿತಿ ನೀಡಿದರು.

    ಪಂಚಾಯತ್‍ಗಳಲ್ಲಿ ತೆರಿಗೆ ಪರಿಷ್ಕರಣೆಯನ್ನು ತೀವ್ರಗತಿಯಲ್ಲಿ ಮಾಡಿ ನಿಗದಿತ ಗುರಿ ಸಾಧಿಸಿ ಎಂದು ಕಾರ್ಯನಿರ್ವಹಣಾಧಿಕಾರಿಗಳಿಗೆ ಮುಖ್ಯ ಯೋಜನಾಧಿಕಾರಿಗಳು ಸೂಚನೆ ನೀಡಿದರು.

    ರಸಗೊಬ್ಬರ ವಿತರಣೆಗೆ ಸಂಬಂಧಿಸಿದಂತೆ ಒಟ್ಟು 116 ಮಾರಾಟ ಕೇಂದ್ರಗಳಲ್ಲಿ 43 ಮಾರಾಟಗಾರರು ಪಿಒಎಸ್ (ಪಾಯಿಂಟ್ ಆಫ್ ಸೇಲ್) ಮೆಷಿನ್ ಅಳವಡಿಸಿದ್ದು, ಖರೀದಿಸಲು ಬರುವ ರೈತರ ಆಧಾರ್ ಮತ್ತು ಬೆರಳಚ್ಚು ಕಡ್ಡಾಯವಾಗಿ ಪಡೆದುಕೊಳ್ಳಬೇಕಾಗಿದೆ.

    ಮಾರಾಟಗಾರರಿಗೆ ಈಗಾಗಲೇ ತರಬೇತಿಗಳನ್ನು ನೀಡಲಾಗಿದೆ.

    ಜನವರಿ 1ರಿಂದ ದೇಶದಾದ್ಯಂತ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಂಟನಿ ಮರಿಯಾ ಇಮ್ಯಾನ್ಯುಯಲ್ ಅವರು ವಿವರಿಸಿದರು.

    ಈ ಸಂಬಂಧ ರೈತರಿಗೆ ಮಾಹಿತಿ ನೀಡಲಾಗುತ್ತಿದೆ; ಸಬ್ಸಿಡಿ ಆಧರಿತ ರಸಗೊಬ್ಬರ ದುರುಪಯೋಗ ತಡೆಗೆ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದರು.

    ಎಲ್ಲಾ ಪ್ರಕ್ರೀಯೆಗಳು ಮೇ , ಜೂನ್‍ಗೆ ಪೂರ್ಣಗೊಳ್ಳುತ್ತದೆ. ಬಿತ್ತನೆ ಬೀಜ ಸಾಕಷ್ಟು ದಾಸ್ತಾನಿದ್ದು ದ್ವಿದಳ ಧಾನ್ಯಗಳ ಬೀಜಕ್ಕೆ ಬೇಡಿಕೆ ಇಲ್ಲ ಎಂದು ಹೇಳಿದರು.

    ಕೃಷಿ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳಲ್ಲಿ 85% ಪ್ರಗತಿ ದಾಖಲಾಗಿದೆ ಎಂದು ಅವರು ಸಭೆಗೆ ವಿವರಿಸಿದರು.

    ಜಿಲ್ಲೆಯಲ್ಲಿ ಶಿಕ್ಷಕರ ನಿಯೋಜನೆ ಕುರಿತು ಈ ವರ್ಷದಲ್ಲಿ ನಡೆದ ಪ್ರಕ್ರಿಯೆಯ ಸಮಗ್ರ ಮಾಹಿತಿಯನ್ನು ತಮಗೆ ನೀಡಲು ಜಿಲ್ಲಾ ಪಂಚಾಯತ್ ಅಧ್ಯಕ್ಷರು ವಿದ್ಯಾಂಗ ಉಪನಿರ್ದೇಶಕರಾದ ಶೇಷಶಯನ ಅವರಿಗೆ ಸೂಚಿಸಿದರು.

    ಶಾಲೆಬಿಟ್ಟ ಮಕ್ಕಳ ಸಂಖ್ಯೆ ಹಾಗೂ ಸೇರ್ಪಡೆ ಸಂಬಂಧ ಸಮಗ್ರ ಸಮೀಕ್ಷೆ ನಡೆಸಿ ಸರಿಯಾಗಿ ಮಾಹಿತಿ ಪಡೆದುಕೊಳ್ಳಬೇಕೆಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಶಿಕ್ಷಣ ಇಲಾಖೆಯ ಉಪನಿದೇರ್ಶಕರಿಗೆ ಈ ಸಂದರ್ಭದಲ್ಲಿ ಸೂಚನೆ ನೀಡಿದರು.

    ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಪಾಶ್ರ್ವನಾಥ್ ಅವರು ಮಾಹಿತಿ ನೀಡಿ, ಸೈಕ್ಲೋನ್‍ನಿಂದ ಜಿಲ್ಲೆಯ ದೋಣಿಗಳು ಸಮುದ್ರಕ್ಕಿಳಿಯದೆ ನಷ್ಟ ಸಂಭವಿಸಿದೆ ಆದರೆ ಯಾವುದೇ ಜೀವ ಹಾನಿ ಮತ್ತು ಬೋಟ್‍ಗಳಿಗೆ ಹಾನಿಯಾಗಿಲ್ಲ ಎಂದು ಸ್ಪಷ್ಟ ಪಡಿಸಿದರು.

    ಎಲ್ಲ ನಿಗಮಗಳು ಆಯ್ಕೆ ಸಮಿತಿ ಸಭೆ ನಡೆಸಿದ್ದು, ತರಬೇತಿಯನ್ನು ಆಯ್ಕೆಯಾದವರಿಗೆ ನೀಡಲಾಗುತ್ತಿದೆ;

    ಮುಂದಿನ ಹಂತದಲ್ಲಿ ನೆರವನ್ನು ಆರ್‍ಟಿಜಿಎಸ್ ಮುಖಾಂತರ ನೀಡಲಾಗುತ್ತದೆ ಎಂದು ನಿಗಮದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

    ವಾರಾಹಿ ಕಾಲುವೆಯಲ್ಲಿ ಕೃಷಿಕರಿಗೆ ನೀರು ಬಿಡುವ ಬಗ್ಗೆ ಯಾವುದೇ ಸಬೂಬುಗಳನ್ನು ನೀಡದೆ ಕೃಷಿಕರಿಗೆ ನೀರನ್ನು ನೀಡುವ ವ್ಯವಸ್ಥೆಯಾಗಬೇಕು;

    ಈ ಸಂಬಂಧ ಕುಂದಾಪುರ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ತಕ್ಷಣವೇ ಸಭೆ ಕರೆದು ರೈತ ಪರ ಕ್ರಮಗಳನ್ನು ಕೈಗೊಳ್ಳಲು ವಾರಾಹಿ ಇಂಜಿನಿಯರ್‍ಗಳಿಗೆ ಸೂಚನೆ ನೀಡಬೇಕೆಂದು ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಹೇಳಿದರು.

    ಸಾಮಾನ್ಯ ಸಭೆ ಪಾಲನಾ ವರದಿಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.

    ಅಗತ್ಯ ಪ್ರದೇಶಗಳಿಗೆ ಕೆಎಸ್‍ಆರ್‍ಟಿಸಿ ಅವರು ಬಸ್ ಓಡಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿಲ್ಲಾ ಪಂಚಾಯತ್‍ನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ.ಎಸ್.ಕೋಟ್ಯಾನ್, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply