Connect with us

FILM

ಹೃದಯಾಘಾತಕ್ಕೆ ಬಲಿಯಾದ ಮಾತಿನ ಮಲ್ಲಿ RJ ರಚನಾ

ಬೆಂಗಳೂರು ಫೆಬ್ರವರಿ 22: ರೇಡಿಯೊದಲ್ಲಿ ಮಾತಿನ ಮೂಲಕ ಮನೆಮಾತಾಗಿದ್ದ ಆರ್ ಜೆ ರಚನಾ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.

ರೇಡಿಯೋ ಮಿರ್ಚಿ ಮೂಲಕ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದ ಖ್ಯಾತ ಆರ್.ಜೆ ರಚನಾ (RJ Rachana) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಮ್ಮ ಕಂಠ ಸಿರಿಯಿಂದಲೇ ಫೇಮಸ್ ಆಗಿದ್ದ ರಚನಾ ಏಳು ವರ್ಷಗಳ ಹಿಂದೆ ಆರ್.ಜೆ ವೃತ್ತಿಗೆ ವಿದಾಯ ಹೇಳಿದ್ದರು.


ರೇಡಿಯೋ ಮಿರ್ಚಿ, ರೇಡಿಯೋ ಸಿಟಿ ಸೇರಿದಂತೆ ಹಲವು ರೇಡಿಯೋ ವಾಹಿನಿಗಳಲ್ಲಿ ಕೆಲಸ ಮಾಡಿದ್ದ ಅವರು, ತಮ್ಮದೇ ವಿಶೇಷ ಶೈಲಿಯ ಮಾತಿನಿಂದ ಅಪಾರ ಕೇಳುಗರನ್ನು ಪಡೆದಿದ್ದರು. ಹಾಗಾಗಿ ರಚನಾ ಕಾರ್ಯಕ್ರಮಗಳನ್ನು ಕೇಳಲು ಕೇಳುಗರ ವರ್ಗವೇ ಸೃಷ್ಟಿಯಾಗಿತ್ತು. ಅದರಲ್ಲೂ ಸ್ಯಾಂಡಲ್ ವುಡ್ ನ ಅನೇಕ ಸ್ಟಾರ್ ನಟರು ರಚನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ತುದಿಗಾಲಲ್ಲಿ ನಿಲ್ಲುತ್ತಿದ್ದರು.

Advertisement
Click to comment

You must be logged in to post a comment Login

Leave a Reply