Connect with us

FILM

ಭೋಜ್​ಪುರಿ ಚಿತ್ರರಂಗದ ಮತ್ತೊಂದು ನಟಿ ಖಾಸಗಿ ವಿಡಿಯೋ ವೈರಲ್…!!

ಮುಂಬೈ : ಭೋಜ್​ಪುರಿ ಸಿನೆಮಾ ಇಂಡಸ್ಟ್ರಿ ಇದೀಗ ಕೆಟ್ಟ ಕಾರಣಗಳಿಂದಾಗಿ ಸುದ್ದಿಯಲ್ಲಿದ್ದು, ಭೋಜ್ ಪುರಿ ಚಿತ್ರರಂಗದ ನಟಿಯರ ಖಾಸಗಿ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇತ್ತಿಚೆಗಷ್ಟೇ ಭೋಜ್​ಪುರಿ ನಟಿ ತ್ರಿಷಾ ಕರ್​ ಮಧು ಎಂಎಂಎಸ್​ ವಿಡಿಯೋ ಲೀಕ್​ ಆದ ಬೆನ್ನಲ್ಲೇ ಮತ್ತೊಬ್ಬ ಭೋಜ್​ಪುರಿ ನಟಿ ಪ್ರಿಯಾಂಕ ಪಂಡಿತ್​ ವಿಡಿಯೋ ಕೂಡ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಸದ್ಯ ವೈರಲ್​ ಆಗಿರುವ ಪ್ರಿಯಾಂಕಾ ವಿಡಿಯೋ ಹಳೆಯದ್ದು ಎನ್ನಲಾಗಿದ್ದು, ತ್ರಿಷಾ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಪ್ರಿಯಾಂಕಾ ವಿಡಿಯೋ ಕೂಡ ಮತ್ತೆ ವೈರಲ್​ ಆಗಿದೆ. ಈ ಬಗ್ಗೆ ಮಾಧ್ಯಮವೊಂದರಲ್ಲಿ ಮಾತನಾಡಿರುವ ನಟಿ, ನನ್ನ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಈ ವಿಡಿಯೋವನ್ನು ಪ್ರಕಟಿಸಲಾಗಿದೆ. ಅಲ್ಲದೆ, ಆ ವಿಡಿಯೋದಲ್ಲಿ ಇರುವುದು ನಾನಲ್ಲ. ದುರುದ್ದೇಶದಿಂದಲೇ ವಿಡಿಯೋವನ್ನು ಎಡಿಟ್​ ಮಾಡಿ ಬಿಡಲಾಗಿದೆ ಎಂದು ಆರೋಪಿಸಿದ್ದಾರೆ.


ಈ ಸಂಬಂಧ ನಟಿ ಪ್ರಿಯಾಂಕಾ ದೂರು ಸಹ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು ಎಂಎಂಎಸ್​ ಲಿಂಕ್​ನ ಮೂಲವನ್ನು ಹುಡುಕುತ್ತಿದ್ದಾರೆ. ಅಲ್ಲದೆ, ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋಗಳನ್ನು ತೆಗೆದು ಹಾಕುತ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *