Connect with us

    LATEST NEWS

    ಭಾರತಕ್ಕೆ ಬಂದ ಬಳಿಕ ಕಂದಮ್ಮನನ್ನು ಮುದ್ದಾಡುತ್ತಿರುವ ಬಾಲಕಿ..ವಿಡಿಯೋ ವೈರಲ್

    ನವದೆಹಲಿ ಅಗಸ್ಟ್ 22 : ಅಪ್ಘಾನಿಸ್ತಾನದಿಂದ ಭಾರತೀಯರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಮುಂದುವರೆದಿದ್ದು, ಇಬ್ಬರು ಅಫ್ಘಾನ್ ಸೆನೆಟರ್ ಹಾಗೂ 107 ಭಾರತೀಯ ನಾಗರಿಕರು ಸೇರಿದಂತೆ 168 ಜನರನ್ನು ಇಂದು ವಿಶೇಷ ವಾಯುಪಡೆ ವಿಮಾನವೊಂದರ ಮೂಲಕ ಕಾಬೂಲ್ ನಿಂದ ಭಾರತಕ್ಕೆ ಸ್ಥಳಾಂತರಿಸಲಾಗಿದೆ.


    ಈ ವಿಮಾನ ವಾಯುನೆಲೆಯಲ್ಲಿ ಬಂದಿಳಿಯುತ್ತಿದ್ದಂತೆ ತಾಯಿ ಕಂಕುಳಲ್ಲಿದ್ದ ಶಿಶುವೊಂದಕ್ಕೆ ಬಾಲಕಿ ಸಂತೋಷದಿಂದ ಮುತ್ತಿಕ್ಕಿ ಮುದ್ದಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುದ್ದಿಸಂಸ್ಥೆ ಎಎನ್ ಐ ಈ ವಿಡಿಯೋವನ್ನು ಹಂಚಿಕೊಂಡಿದೆ.

    ತಾಲಿಬಾನಿಗಳ ನಾಡಿನಿಂದ ಸುರಕ್ಷಿತವಾಗಿ ಭಾರತಕ್ಕೆ ಬಂದ ಕಂದಮ್ಮಗಳು ತಮ್ಮ ಸಂತೋಷನವನ್ನು ಮುದ್ದಿಸುವ ಮೂಲಕ ಹಂಚಿಕೊಂಡಿವೆ. ಇನ್ನು ಮಗುವಿನ ಜೊತೆಗೆ ಇದ್ದ ಮಹಿಳೆ ಕೂಡಾ ಕಳೆದ ಕಳೆದ ಏಳು ದಿನಗಳಿಂದ ಕಾಬೂಲ್ ನಲ್ಲಿ ಕಳೆದ ಭಾವನಾತ್ಮಕ ಮತ್ತು ದೈಹಿಕ ಒತ್ತಡದ ಬಗ್ಗೆ ಮಾತನಾಡುವುದನ್ನು ವಿಡಿಯೋದಲ್ಲಿ ಕೇಳಬಹುದು.

    Share Information
    Advertisement
    Click to comment

    You must be logged in to post a comment Login

    Leave a Reply