ಕ್ಯಾನ್ಸರ್ ಗೆ ಮತ್ತೊಬ್ಬ ಬಾಲಿವುಡ್ ನಟ ಬಲಿ – ಹಿರಿಯ ನಟ ರಿಷಿ ಕಪೂರ್ ವಿಧಿವಶ

ಮುಂಬೈ:ಮಹಾಮಾರಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್‌ ಹಿರಿಯ ನಟ ರಿಷಿ ಕಪೂರ್ (69)‌ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ರಿಷಿ ಕಪೂರ್‌ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಉಸಿರಾಟದ ತೊಂದರೆ ಸಹ ಕಾಣಿಸಿಕೊಂಡ ಕಾರಣ ಅವರನ್ನು ಇಲ್ಲಿನ ಸರ್ ಎಚ್‌ಎನ್‌ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಬುಧವಾರ ರಾತ್ರಿ ದಾಖಲಿಸಲಾಗಿತ್ತು.

2018ರಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಪೂರ್‌, ಅಮೆರಿಕದಲ್ಲಿ ಒಂದು ವರ್ಷಕಾಲ ಚಿಕಿತ್ಸೆ ಪಡದು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ವಾಪಸ್‌ ಆಗಿದ್ದರು.

ಫೆಬ್ರವರಿಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿದ್ದರು.ಕಪೂರ್‌ ಸಾವಿಗೆ ಬಾಲಿವುಡ್‌ ದಿಗ್ಗಜ ಅಮಿತಾಬ್‌ ಬಚನ್‌ ಟ್ವಿಟರ್‌ನಲ್ಲಿ ಕಂಬನಿ ಮಿಡಿದಿದ್ದಾರೆ.