LATEST NEWS
ಮಂಗಳೂರಿನ ಬೋಳೂರು ನಿವಾಸಿಗೆ ಕೊರೊನಾ ಸೊಂಕು
ಮಂಗಳೂರಿನ ಬೋಳೂರು ನಿವಾಸಿಗೆ ಕೊರೊನಾ ಸೊಂಕು
ಮಂಗಳೂರು ಎ.30: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಪ್ರಕರಣ ಹೆಚ್ಚಾಗಾತ್ತಲೆ ಇದ್ದು, ಇಂದು ಮತ್ತೆ ಒಬ್ಬರಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಮಂಗಳೂರಿನ ಬೋಳೂರು ನಿವಾಸಿಗೆ 58 ವರ್ಷದ ಮಹಿಳೆಗೆ ಕೊರೊನಾ ಪಾಸಿಟಿವ್ ದಢಪಟ್ಟಿದೆ. ಫಸ್ಟ್ ನ್ಯೂರೋದಲ್ಲಿ ಸ್ವೀಪರ್ ಆಗಿದ್ದ P501 ಸಂಪರ್ಕದಿಂದ ಮಹಿಳೆಗೆ ಕೊರೊನಾ ಸೊಂಕು ತಗುಲಿದೆ.
ಕೊರೊನಾ ಸೊಂಕಿತ ಮಹಿಳೆ ಮಂಗಳೂರಿನ ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಪಾರ್ಶ್ವವಾಯು ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಸ್ವೀಪರ್ ಆಗಿದ್ದ ಕೊರೊನಾ ಸೊಂಕಿತೆ ಪಿ-501 ರ ಸಂಪರ್ಕದಿಂದ ಇವರಿಗೆ ಕೊರೊನಾ ತಗುಲಿದೆ.
ಈ ಮೂಲಕ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋವಿಡ್–19 ಸೋಂಕಿತರ ಸಂಖ್ಯೆ22 ಕ್ಕೆ ಏರಿಕೆಯಾಗಿದೆ. ಈಗಾಗಲೇ 12 ಮಂದಿ ಗುಣಮುಖರಾಗಿದ್ದು, 2 ಮಂದಿ ಮೃತಪಟ್ಟಿದ್ದಾರೆ. 8 ಮಂದಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೋಳೂರು ಪ್ರದೇಶ ಕಂಪ್ಲೀಟ್ ಸೀಲ್ ಡೌನ್ ಮಾಡಲಾಗಿದೆ.
You must be logged in to post a comment Login