LATEST NEWS
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತೆಯ ಹೊಣೆ ʼರಿಯೊʼ ಹೆಗಲಿಗೆ…!

ಮಂಗಳೂರು: ದೇಶದ ಅತೀ ಸೂಕ್ಮಾ ವಿಮಾನ ನಿಲ್ದಾಣಗಳಲ್ಲಿ ಒಂದಾದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (mangalore Airport) ಭದ್ರತೆಯ ಹೊಣೆ ‘ ರಿಯೊ’ ಹೆಗಲೇರಿದೆ.
ಇದುವರೆಗೆ ಈ ವಿಭಾಗದ ಶ್ವಾನ ತಂಡದಲ್ಲಿದ್ದ ಲ್ಯಾಬ್ರಡಾರ್ ತಳಿಯ 8 ರ ಹರೆಯದ ‘ಜ್ಯೂಲಿ’ ನಿವೃತ್ತಿಯಾಗಿದ್ದಾಳೆ. ಜೂಲಿಯ ನಿರ್ಗಮನದ ಬೆನ್ನಲ್ಲೆ ತಂಡಕ್ಕೆ 11 ತಿಂಗಳ ಮತ್ತೊಂದು ಲ್ಯಾಬ್ರಡಾರ್ ಶ್ವಾನ ‘ರಿಯೊ’ ಸೇರಿಕೊಂಡಿದೆ.

ಹಿರಿಯ ಕಮಾಂಡೆಂಟ್ ಮತ್ತು ಮುಖ್ಯ ಏರೋಡ್ರೋಮ್ ಭದ್ರತಾ ಅಧಿಕಾರಿ ವೀರೇಂದ್ರ ಮೋಹನ್ ಜೋಶಿ, ಮತ್ತು ಇತರ ಅಧಿಕಾರಿಗಳು ಶ್ವಾನ ಜೂಲಿಯ ಅಚಲವಾದ ಸಮರ್ಪಣೆ ಮತ್ತು ನಿಷ್ಠೆಯನ್ನು ಗುರುತಿಸಿ ಮಾಲಾರ್ಪಣೆ ಮಾಡಿ ಗೌರವಯುತವಾಗಿ ಕೇಕ್ ಮತ್ತು ಹಾರ ಹಾಕಿ ಬೀಳ್ಕೊಟ್ಟರು. ನಿವೃತ್ತಿಯಾಗಿರುವ ಜ್ಯೂಲಿಯನ್ನು ಆಕೆಯ ಹ್ಯಾಂಡ್ಲರ್ ಸಿಐಎಸ್‌ಎಫ್ ಯೋಧ ಕುಮಾರ ದತ್ತು ಸ್ವೀಕರಿಸಿದ್ದಾರೆ.
ಹೊಸ ಶ್ವಾನ ರಿಯೊಗೆ ರಾಂಚಿಯಲ್ಲಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಶ್ವಾನ ತರಬೇತಿ ಕೇಂದ್ರದಲ್ಲಿ ಕಠಿಣ ತರಬೇತಿ ನೀಡಲಾಗಿದೆ.