FILM
ಖ್ಯಾತ ನಟಿ ರಿಮಿಸೇನ್ ಗೆ 4.14 ಕೋಟಿ ಪಂಗನಾಮ ಹಾಕಿದ ವ್ಯಕ್ತಿ….!!

ಮುಂಬೈ: ಖ್ಯಾತ ನಟಿಯೊಬ್ಬರಿಗೆ ವ್ಯಕ್ತಿಯೊಬ್ಬ 4.14 ಕೋಟಿ ಹಣ ವಂಚನೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ಕುರಿತಂತೆ ಗೋರೆಗಾಂವ್ ಮೂಲದ ಉದ್ಯಮಿಯ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿದ್ದಾರೆ.
ಖ್ಯಾತ ನಟಿ ರಿಮಿಸೇನ್ ವಂಚನೆಗೊಳಗಾದವರು. ಅತಿ ಹಣದ ಆಸೆಗೆ ಬಿದ್ದ ನಟಿ ತನಗೆ ಜಿಮ್ ನಲ್ಲಿ ಪರಿಚಯವಾದ ರೋಣಕ್ ಜಟಿನ್ ಎಂಬಾತನಿಗೆ ವ್ಯಪಾರ ಮಾಡಲು 4.14 ಕೋಟಿ ಹಣ ನೀಡಿದ್ದಾರೆ. ಎಲ್ಇಡಿ ಬಲ್ಬ್ಗಳ ವ್ಯವಹಾರ ಮಾಡುವುದಾಗಿ ಆತ ಹೇಳಿಕೊಂಡಿದ್ದ. ಅಲ್ಲದೆ, ಈ ಉದ್ಯಮದ ಮೇಲೆ ದೊಡ್ಡ ಮೊತ್ತದ ಹೂಡಿಕೆ ಮಾಡಿದರೆ ಶೇ.40 ಲಾಭ ತೆಗೆದುಕೊಡುವುದಾಗಿ ಹೇಳಿದ್ದ. ಈ ಆಸೆಗೆ ಬಿದ್ದ ರಿಮಿ ಅವರು ಕಣ್ಮುಚ್ಚಿಕೊಂಡು 4.4 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಆ ಬಳಿಕ ಆತ ನಾಪತ್ತೆ ಆಗಿದ್ದಾನೆ.

2019ರಲ್ಲಿ ಜಿಮ್ನಲ್ಲಿ ರೋಣಕ್ ನನಗೆ ಪರಿಚಯ ಆಗಿದ್ದ. ನಂತರ ನಾವಿಬ್ಬರೂ ಗೆಳೆಯರಾದೆವು. 4.4 ಕೋಟಿ ರೂಪಾಯಿ ಹಣವನ್ನು ನನ್ನಿಂದ ತೆಗೆದುಕೊಂಡ. ಲಾಭದ ಜತೆಗೆ ಹಣ ಹಿಂದಿರುಗಿಸಲು ಒಂದು ಗಡುವು ನೀಡಿದ್ದ. ಆದರೆ, ಈಗ ಹಣವೂ ಇಲ್ಲ, ಆತ ನನ್ನ ಕರೆಯನ್ನೂ ಸ್ವೀಕರಿಸುತ್ತಿಲ್ಲ’ ಎಂದು ರಿಮಿ ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಚ್ಚರಿ ಎಂದರೆ ರೋಣಕ್ ಯಾವುದೇ ಉದ್ಯಮ ಹೊಂದಿರಲಿಲ್ಲ. ನಟಿಯಿಂದ ಹಣ ಕೀಳುವುದೊಂದೇ ಆತನ ಉದ್ದೇಶ ಆಗಿತ್ತು.