LATEST NEWS
ವಿದೇಶದಲ್ಲಿ ಸ್ಥಿರಾಸ್ತಿ ಸಂಪಾದನೆ – ಇಡಿಯಿಂದ ಮಂಗಳೂರು ಉದ್ಯಮಿಯ 8.3 ಕೋಟಿಯ ಮನೆ ಜಪ್ತಿ
ಮಂಗಳೂರು ಎಪ್ರಿಲ್ 1: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಮಂಗಳೂರಿನ ಉದ್ಯಮಿಗೆ ಸೇರಿದ 8.3 ಕೋಟಿ ಮೌಲ್ಯದ ಮನೆಯಲ್ಲಿ ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಇನ್ಫ್ರಾ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಷರೀಫ್ ಮೆರೈನ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಮಂಗಳೂರಿನ ನಿವಾಸಿ ಇಕ್ಬಾಲ್ ಅಹ್ಮದ್ ಅವರು ಫೆಮಾದ ನಿಬಂಧನೆಗಳನ್ನು ಉಲ್ಲಂಘಿಸಿ ವಿದೇಶದಲ್ಲಿ ಅಕ್ರಮವಾಗಿ ಸ್ಥಿರಾಸ್ತಿ ಸಂಪಾದಿಸಿದ್ದ ಆರೋಪದ ಮೇಲೆ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ತಿಳಿಸಿದ್ದು, ದುಬೈನ ಯುಎಇ ನಲ್ಲಿ 53.09 ಲಕ್ಷ ರೂ.ಯುಎಇ ದಿರಂಗಳ (ಭಾರತದ 8.3 ಕೋಟಿ ರೂಪಾಯಿ) ಸ್ಥಿರಾಸ್ತಿ ಸಂಪಾದಿಸಿದ್ದರು. ಇದು ಫೆಮಾದ ಸೆಕ್ಷನ್ 4ರ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಹಿನ್ನಲೆ ಮಂಗಳೂರಿನ ತ್ತಾವರದ ಇಕ್ಬಾಲ್ ಅಹ್ಮದ್ ಅವರಿಗೆ ಸೇರಿದ 8.3 ಕೋಟಿ ರೂ. ಮೌಲ್ಯದ ಮನೆಯನ್ನು ಜಪ್ತಿ ಮಾಡಿದ್ದಾರೆ.
You must be logged in to post a comment Login