LATEST NEWS
ಟಾಪ್ ಲೆಸ್ ಪೋಟೋ ದಲ್ಲಿ ಗಣೇಶ ವಿಗ್ರಹ..ಪಾಪ್ ಸಿಂಗರ್ ರಿಹಾನ್ ವಿರುದ್ದ ಆಕ್ರೋಶ

ಬ್ರಿಡ್ಜ್‌ಟೌನ್: ವಿವಾದಿತ ರೈತ ಮಸೂದೆ ವಿರೋಧಿಸಿ ನಡೆಯುತ್ತಿರುವ ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ಅಂತರಾಷ್ಟ್ರೀಯ ಪಾಪ್ ಸಿಂಗರ್ ರಿಹಾನ್ ಈಗ ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆರೋಪಕ್ಕೆ ಗುರಿಯಾಗಿದ್ದಾರೆ.
ಈಗಾಗಲೇ ದೇಶದಲ್ಲಿ ರಿಹಾನ ಹೆಸರು ಪ್ರಚಲಿತಲಿದ್ದು, ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ನಂತರ ಈಕೆ ಭಾರತದಲ್ಲಿ ತನ್ನ ಖ್ಯಾತಿ ಹೆಚ್ಚಿಸಿಕೊಂಡಿದ್ದಳು, ಆದರೆ ರಿಹಾನ ಇತ್ತೀಚೆಗೆ ಒಂದು ಫೋಟೋ ಶೂಟ್ ಮಾಡಿಸಿದ್ದಾರೆ.

ಟಾಪ್, ಒಳ ಉಡುಪು ಹಾಕದೆಯೇ ಫೋಟೋಶೂಟ್ ಮಾಡಲಾಗಿದೆ. ಬಟ್ಟೆ ಇಲ್ಲದ ಫೋಟೋದಲ್ಲಿ ರಿಹಾನ ಎರಡು ಮೂರು ಉದ್ದದ ಸರಗಳನ್ನು ತೊಟ್ಟಿದ್ದಾರೆ. ಅದರಲ್ಲಿ ಒಂದು ಸರದಲ್ಲಿ ಹಿಂದೂಗಳ ದೇವರಾದ ಗಣೇಶನ ಪದಕವಿದೆ. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಫೋಟೋವನ್ನು ಹಾಕಿರುವ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸನಾತನ ಧರ್ಮ ಭಾರತದಲ್ಲಿ ತುಂಬಾ ಸಹಿಷ್ಣು. ತುಂಬಾ ತಾಳ್ಮೆಯಿಂದಿರುತ್ತದೆ. ಇದರಿಂದಾಗಿ ಚಲನಚಿತ್ರ ತಯಾರಕರು, ಜಾಹೀರಾತುದಾರರು ಸೇರಿ ಅನೇಕರು ನಮ್ಮ ದೇವರು ಮತ್ತು ದೇವತೆಗಳ ಬಗ್ಗೆ ವ್ಯಂಗ್ಯವಾಡುತ್ತಾರೆ. ಅದೇ ಕೆಲವು ಧರ್ಮಗಳ ಬಗ್ಗೆ ಇನ್ನೊಂದು ಧರ್ಮದವರು ರೇಖಾಚಿತ್ರ ತಯಾರಿಸಿದರೂ ಅದು ದೊಡ್ಡ ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತದೆ. ಇದು ನಮ್ಮ ತಾಳ್ಮೆಯ ಪರೀಕ್ಷೆ. ಇನ್ನು ತಾಳ್ಮೆ ಕಾಪಾಡಿಕೊಳ್ಳಲು ಆಗದು, ಅದನ್ನೆಲ್ಲ ಮೀರಿ ಈ ಸಮಸ್ಯೆ ಬೆಳೆದುಬಿಟ್ಟಿದೆ ಎಂದು ದೂರಿದ್ದಾರೆ