Connect with us

    KARNATAKA

    ಹುಬ್ಬಳ್ಳಿ ಕಾಲೇಜ್ ವಿದ್ಯಾರ್ಥಿನಿ ‘ನೇಹಾ’ ಹತ್ಯೆ ಮಾಡಿದ ‘ಫಯಾಜ್’ ರುಂಡ ಚೆಂಡಾಡಿದವರಿಗೆ 10 ಲಕ್ಷ ರೂ ಬಹುಮಾನ ಘೋಷಣೆ..!

    ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿ ಕಾಂಗ್ರೆಸ್‌ ಕಾರ್ಪೊರೇಟರ್ ಪುತ್ರಿ ನೇಹಾಳ ಭೀಕರ ಹತ್ಯೆ ಮಾಡಿದ ಆರೋಪಿ ಫಯಾಜ್ ರುಂಡ ಚೆಂಡಾಡಿದವರಿಗೆ 10 ಲಕ್ಷ ರೂ. ಬಹುಮಾನ ಜಯ ಕರ್ನಾಟಕ ಸಂಘಟನೆ ಘೋಷಣೆ ಮಾಡಿದೆ.


    ಜಯ ಕರ್ನಾಟಕ ಸಂಘಟನೆಯ ಮುಖಂಡ ಇಜಾರಿ ಈ ಘೋಷಣೆ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫಯಾಜ್‌ಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ನಾಳೆ ಶನಿವಾರ ಹುಬ್ಬಳ್ಳಿ ಬಂದ್ ಮಾಡುತ್ತೇವೆ ಎಂದು ಹೇಳಿದ್ದಾರೆ.
    ನೇಹಾ ಹಿರೇಮಠ ಕೊಲೆ ಖಂಡಿಸಿ ನಾಳೆ ಹುಬ್ಬಳ್ಳಿ ಬಂದ್ ಮಾಡುತ್ತೇವೆ. ಯಾರ ಮನೆಯಲ್ಲಿ ಹೆಣ್ಮಕ್ಕಳು ಇದ್ದಾರೋ ಅವರೆಲ್ಲಾ ಬಂದ್ ಬೆಂಬಲಿಸಿ. ನಾಳೆ ಬಂದ್ ಅಂಗವಾಗಿ ಬಿವಿಬಿ ಕಾಲೇಜಿನಿಂದ ಮೆರವಣಿಗೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
    ಹುಬ್ಬಳ್ಳಿ ತಾಲೂಕಿನ ವರೂರಿನ ಜೈನಮುನಿ ಗುಣಧರನಂದಿ ಸ್ವಾಮೀಜಿ ಪ್ರತಿಕ್ರಿಯಿಸಿದ್ದು, ನೇಹಾ ಹತ್ಯೆಯಿಂದ ಮಾನಸಿಕವಾಗಿ ನೋವಾಗಿದೆ. ಎಜುಕೇಶನ್ ಕಟ್ಟಡ ಎನ್ನುವುದು ಒಂದು ಮಂದಿರ. ನೇಹಾಗೆ ಶಾಂತಿ ಸಿಗಬೇಕು ಅಂದರೆ ಕೂಡಲೇ ಸರಕಾರ ಕಾನೂನು ಜಾರಿ ಮಾಡಬೇಕು. ಮಂದಿರದಲ್ಲಿ ಆತ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ. ಸರ್ಕಾರ ಇದನ್ನು ಹಗುರವಾಗಿ ತಗೆದುಕೊಳ್ಳಬಾರದು ಎಂದು ಹೇಳಿದ್ದಾರೆ. ಇದು ಕರ್ನಾಟಕ ಸಂಸ್ಕ್ರತಿ ಅಲ್ಲ. ಸನ್ಯಾಸಿಗಳ ಹತ್ಯೆ ಆಗಿದೆ. ಸರ್ಕಾರ ವಿಶೇಷ ಕಾಯ್ದೆ ತರಬೇಕು. ಶಾಲೆ ಕಾಲೇಜು ಸುತ್ತ ಎರಡು ಕಿಲೋ ಮೀಟರ್ ಮಾದಕ ಪದಾರ್ಥ ಇರಬಾರದು. ಮದ್ಯ ಸೇರಿ ಯಾವ ಮಾದಕ ಪದಾರ್ಥಗಳು ಸಿಗಬಾರದು. ಇಂತಹ ಘಟನೆ ಮತ್ತೆ ಕರ್ನಾಟಕದಲ್ಲಿ ಆಗಬಾರದು. ಖಡಕ್ ಕಾನೂನು, ಖಡಕ್ ಶಿಕ್ಷೆಯಾಗಬೇಕು ಎಂದಿದ್ದಾರೆ.
    ಎಬಿವಿಪಿ ಕಾರ್ಯದರ್ಶಿ ಸಚಿನ್​ ಪ್ರತಿಕ್ರಿಯಿಸಿದ್ದು, ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪೂರ್ವ ನಿಯೋಜಿತ ಕೃತ್ಯ. ಮೇಲ್ನೋಟಕ್ಕೆ ಇದೊಂದು ಲವ್ ಜಿಹಾದ್ ಪ್ರಕರಣ ಎನಿಸುತ್ತಿದೆ. ಕಾಲೇಜು ಕ್ಯಾಂಪಸ್‌ನೊಳಗೆ ಚಾಕುವಿನಿಂದ ಚುಚ್ಚಿ ಕೊಂದಿದ್ದಾನೆ. ಸಿಎಂ, ಗೃಹಮಂತ್ರಿ ಅದ್ಹೇಗೆ ಆಕಸ್ಮಿಕ ಘಟನೆ ಅಂತಾರೋ ಗೊತ್ತಿಲ್ಲ. ಅವರ ಹೇಳಿಕೆ ನಮಗೆ ಅಚ್ಚರಿ ಮೂಡಿಸಿದೆ ಎಂದರು.ಅನುಕಂಪ ತೋರಿಸದೇ ಹಂತಕನನ್ನು ಎನ್​ಕೌಂಟರ್​ ಮಾಡಬೇಕು. ಕಾಲೇಜು ಕ್ಯಾಂಪಸ್‌ನಲ್ಲಿ ಭಯಮುಕ್ತ ವಾತಾವರಣ ಸೃಷ್ಟಿಯಾಗಬೇಕು. ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply