Connect with us

LATEST NEWS

2021ರಲ್ಲಿ ಭಾರತದಲ್ಲಿ ರಿಲಯನ್ಸ್ ಜಿಯೋ 5ಜಿ – ಮುಕೇಶ್ ಅಂಬಾನಿ

ಮುಂಬಯಿ: 2021ರಲ್ಲಿ ರಿಲಯನ್ಸ್ ಜಿಯೋ ಮೂಲಕ ಭಾರತಕ್ಕೆ 5ಜಿ ತಂತ್ರಜ್ಞಾನ ಬರಲಿದ್ದು, ಭಾರತದಲ್ಲಿ 5ಜಿ ತಂತ್ರಜ್ಞಾನವನ್ನು ರಿಲಯನ್ಸ್‌ ಜಿಯೋ ಮುನ್ನಡೆಸಲಿದೆ ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ. ಮುಖ್ಯಸ್ಥ ಮುಕೇಶ್‌ ಅಂಬಾನಿ ಹೇಳಿದ್ದಾರೆ.


4ನೇ ಆವೃತ್ತಿಯ ‘ಇಂಡಿಯಾ ಮೊಬೈಲ್‌ ಕಾಂಗ್ರೆಸ್‌’ನಲ್ಲಿ ಮಾತನಾಡಿದ ಅವರು, ವೇಗವಾಗಿ 5ಜಿ ಜಾರಿಗೆ ಸರಕಾರಿ ನೀತಿಗಳು ತ್ವರಿತವಾಗಿ ಜಾರಿಯಾಗಬೇಕು ಎಂದು ತಿಳಿಸಿದ್ದಾರೆ. 2021ರ ದ್ವಿತೀಯಾರ್ಧದಲ್ಲಿ ಜಿಯೋ ಭಾರತದಲ್ಲಿ 5 ಜಿ ಕ್ರಾಂತಿಯನ್ನು ಪ್ರಾರಂಭಿಸುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಇದು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ನೆಟ್‌ವರ್ಕ್, ಹಾರ್ಡ್‌ವೇರ್ ಮತ್ತು ತಂತ್ರಜ್ಞಾನವನ್ನು ಹೊಂದಿರಲಿದೆ,” ಎಂದು ಅವರು ವಿವರಿಸಿದ್ದಾರೆ.

ಅಕ್ಟೋಬರ್‌ನಲ್ಲಿ ಜಿಯೋ, ಅಮೆರಿಕ ಮೂಲದ ಕ್ವಾಲಂಕಾಂ ಐಎನ್‌ಸಿ ಜೊತೆ ಸೇರಿ 5ಜಿಗೆ ಬೇಕಾದ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿರುವುದಾಗಿ ಹೇಳಿತ್ತು. ಜೊತೆಗೆ 5ಜಿ ವೇಗವಾಗಿ ಬಳಕೆಗೆ ತರಲು ಯತ್ನಿಸುತ್ತಿರುವುದಾಗಿ ಹೇಳಿತ್ತು.

ರಿಲಯನ್ಸ್‌ನ 43ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮತನಾಡಿದ್ದ ಅಂಬಾನಿ, ಜಿಯೋ ಪೂರ್ಣ ಪ್ರಮಾಣದ 5ಜಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಶೇ.100ರಷ್ಟು ದೇಶಿ ತಂತ್ರಜ್ಞಾನದ ಮೂಲಕ ವಿಶ್ವದರ್ಜೆಯ 5ಜಿ ಸೇವೆಯನ್ನು ಭಾರತದಲ್ಲಿ ಆರಂಭಿಸುವುದಾಗಿ ಹೇಳಿದ್ದರು.

Facebook Comments

comments