Connect with us

    FILM

    ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ಡೀಪ್ ಪೇಕ್ ವಿಡಿಯೋ ವೈರಲ್

    ಬೆಂಗಳೂರು ಮಾರ್ಚ 12: ಡೀಪ್ ಫೇಕ್ ವಿಡಿಯೋ ಸಿನೆಮಾ ನಟಿಯರ ನಿದ್ದೆಗೆಡಿಸಿದೆ. ಈಗಾಗಲೇ ಹಲವು ನಟಿಯರು ಈ ಡೀಫ್ ಫೆಕ್ ವಿಡಿಯೋ ಹಾವಳಿಗೆ ತುತ್ತಾಗಿದ್ದಾರೆ. ಮೊದಲ ಬಾರಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಈ ಡೀಪ್ ಫೇಕ್ ವಿಡಿಯೋ ಹಾವಳಿಗೆ ತುತ್ತಾಗಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದರು, ಇದೀಗ ಮತ್ತೆ ಅವರದೇ ಇನ್ನೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಡೀಪ್​ಫೇಕ್ ವಿಡಿಯೋ ಬಗ್ಗೆ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದ್ದು ರಶ್ಮಿಕಾ ಮಂದಣ್ಣ ಅವರ ಬಗ್ಗೆ ಮಾಡಲಾದ ಫೇಕ್ ವಿಡಿಯೋದಿಂದ. ಯುವತಿಯೊಬ್ಬರು ಸಣ್ಣ ಬಟ್ಟೆ ಧರಿಸಿ ಲಿಫ್ಟ್ ಏರುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ರಶ್ಮಿಕಾ ಮಂದಣ್ಣ ಮುಖವನ್ನು ಅಂಟಿಸಲಾಯಿತು. ಅನೇಕರು ಇದು ರಶ್ಮಿಕಾ ಎಂದೇ ಭಾವಿಸಿದ್ದರು. ಜೊತೆಗೆ ಬಟ್ಟೆ ಬಗ್ಗೆ ಅವರಿಗೆ ಪಾಠ ಹೇಳಿದರು. ಇದನ್ನು ಗಮನಿಸಿದ ಕೆಲವರು ಇದು ಡೀಪ್​ಫೇಕ್ ವಿಡಿಯೋ ಎಂದು ಎಚ್ಚರಿಸಿದರು.


    ಈಗ ರಶ್ಮಿಕಾ ಅವರ ಹೊಸ ಡೀಪ್​ಫೇಕ್ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಯುವತಿಯೊಬ್ಬರು ಡ್ಯಾನ್ಸ್ ಮಾಡುತ್ತಿದ್ದಾರೆ. ಇದಕ್ಕೆ ರಶ್ಮಿಕಾ ಮುಖ ಹಾಕಲಾಗಿದೆ. ಈ ವಿಡಿಯೋಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ‘ರಶ್ಮಿಕಾ ಮಂದಣ್ಣ ಅವರ ಡೀಪ್​ಫೇಕ್ ವಿಡಿಯೋ ಮಾಡಬೇಡಿ’ ಎಂದು ಅವರ ಫ್ಯಾನ್ಸ್ ಕೋರಿಕೊಂಡಿದ್ದಾರೆ. ಕೆಲವರು ಪೊಲೀಸರ ಬಳಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply