FILM
ಡೀಫ್ ಫೇಕ್ ವಿಡಿಯೋ ಬಗ್ಗೆ ರಶ್ಮಿಕಾ ಮಂದಣ್ಣ ರಿಯಾಕ್ಷನ್ – ವಿಡಿಯೋ ಹರಿಬಿಟ್ಟಿರುವ ಕಳ್ಳರನ್ನ ಪತ್ತೆ ಮಾಡಬೇಕು
ಮುಂಬೈ ನವೆಂಬರ್ 06; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ರಶ್ಮಿಕಾ ಮಂದಣ್ಣ ಅವರ ಡೀಫ್ ಫೇಕ್ ವಿಡಿಯೋ ಬಗ್ಗೆ ಇದೀಗ ಭಾರಿ ಆಕ್ರೋಶ ವ್ಯಕ್ತವಾಗಿದೆ, ಈ ನಡುವೆ ವಿಡಿಯೋ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಮಾತನಾಡಿದ್ದು, ಈ ರೀತಿ ತಮ್ಮ ಗುರುತನ್ನ ಮರೆಮಾಚಿ ವಿಡಿಯೋ ಹರಿಬಿಟ್ಟಿರುವ ಕಳ್ಳರನ್ನ ಪತ್ತೆ ಮಾಡಬೇಕು ಎಂದಿದ್ದಾರೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ವರದ್ದು ಎನ್ನಲಾದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗಷ್ಟೇ ವೈರಲ್ ಆಗಿದ್ದು, ವೀಡಿಯೋದಲ್ಲಿ ರಶ್ಮಿಕಾ ಅವರ ಎದೆ ಭಾಗ ಕಾಣಿಸುವಂತೆ ಬಟ್ಟೆ ಹಾಕಿರುವ ವಿಡಿಯೋವನ್ನು ಹಲವರು ಹಂಚಿಕೊಂಡಿದ್ದರು. ಆದರೀಗ ಅದು ರಶ್ಮಿಕಾ ಅವರ ವಿಡಿಯೋ ಅಲ್ಲವೆಂಬ ಸತ್ಯ ಬಯಲಾಗಿದೆ. ಅದನ್ನು ಡೀಫ್ ಫೇಕ್ ಟೆಕ್ನಾಲಜಿ ಬಳಸಿ ಬೆರೆಯೊಬ್ಬರ ದೇಹಕ್ಕೆ ರಶ್ಮಿಕಾ ಅವರ ಮುಖವನ್ನು ಬಳಸಲಾಗಿದೆ ಎಂದು ತಿಳಿದು ಬಂದಿದೆ.
ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ರಶ್ಮಿಕಾ ಈ ರೀತಿಯ ವಿಡಿಯೋ ಆನ್ಲೈನ್ನಲ್ಲಿ ಹರಿದಾಡುತ್ತಿರುವುದು ಬಗ್ಗೆ ಮಾತನಾಡುವುದಕ್ಕೆ ನನಗೆ ಅತ್ಯಂತ ಬೇಜಾರಾಗಿದೆ. ಟೆಕ್ನಾಲಜಿಗಳನ್ನ ಈ ರೀತಿಯಾಗಿ ಮಿಸ್ಯೂಸ್ ಮಾಡಿಕೊಳ್ಳುತ್ತಿರೋದು ಭಯಾನಕ ಕೃತ್ಯ. ನಾನೊಬ್ಬ ಮಹಿಳೆ ಮತ್ತು ನಟಿಯಾಗಿ ನನ್ನ ಜತೆ ನಿಂತಿರುವ ನನ್ನ ಫ್ರೆಂಡ್ಸ್ ಮತ್ತು ಕುಟುಂಬವೇ ನನಗೆ ಧೈರ್ಯ ಮತ್ತಯ ಸ್ಥೈರ್ಯ. ನಾನು ಶಾಲೆ ಅಥವಾ ಕಾಲೇಜಿಗೆ ಹೋಗುತ್ತಿದ್ದಾಗ ಈ ರೀತಿ ಏನಾದ್ರೂ ಆಗಿದ್ದರೆ ಅದನ್ನ ಹೇಗೆ ಎದುರಿಸುತ್ತಿದ್ದೆನೋ ನನಗೆ ಗೊತ್ತಿಲ್ಲ. ಈ ರೀತಿಯ ಕೃತ್ಯಗಳ ವಿರುದ್ಧ ನಾವು ಕಮ್ಯುನಿಟಿಯಂತೆ ಹೋರಾಡಬೇಕು. ಈ ರೀತಿ ತಮ್ಮ ಗುರುತನ್ನ ಮರೆಮಾಚಿ ವಿಡಿಯೋ ಹರಿಬಿಟ್ಟಿರುವ ಕಳ್ಳರನ್ನ ಪತ್ತೆ ಮಾಡಬೇಕು.
ಸದ್ಯ ರಶ್ಮಿಕಾ ವಿಡಿಯೋವನ್ನ ಈ ರೀತಿ ಮಾಡಿರುವುದಕ್ಕೆ ಜನರು ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡಾ ಆಕ್ರೋಶ ಹೊರಹಾಕಿದ್ದಾರೆ. ನಕಲಿ ವಿಡಿಯೋ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಆಗ್ರಹಿಸಿದ್ದಾರೆ.