Connect with us

    DAKSHINA KANNADA

    ” ಬೀಳ್ತದೆ ಅಂತ ನರಿ ಆಸೆ ಇಟ್ಕೊಂಡಿರುವ ಬಿಜೆಪಿಗರದ್ದು ಆಸೆ ಈಡೇರದು, ಸರ್ಕಾರ ಭದ್ರವಾಗಿದೆ “..!

    ಮಂಗಳೂರು :  ಸಿದ್ದರಾಮಯ್ಯ ಅಧಿಕಾರ ವಹಿಸಿದ ದಿನದಿಂದ ಬಿಜಪಿ ವಿನಾಕಾರಣ ಕಾಂಗ್ರೆಸ್ ಮೇಲೆ ಪ್ರಹಾರ ಮಾಡ್ತಿದ್ದು ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.

    ಈ ಬಗ್ಗೆ ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಚಿವರು, ಕೆಪಿಸಿಸಿ ಉಪಾಧ್ಯಕ್ಷರಾದ ಬಿ ರಮಾನಾಥ ರೈ ಗ್ಯಾರಂಟಿ ಅನುಷ್ಠಾನ ವೇಳೆ ಜನರ ಭಾವನೆಯನ್ನು ಸೆಳೆದು ಸರ್ಕಾರ ಅಸ್ಥಿರದ ರೀತಿ ಮಾತಾಡ್ತಿದಾರೆ. ಸರ್ಕಾರ ಅಧಿಕಾರಕ್ಕೆ ಬಂದು ಕೆಲವೇ ತಿಂಗಳಾದ್ದಷ್ಟೆ, ಪರೋಕ್ಷವಾಗಿ ಸರ್ಕಾರದ ಮೇಲೆ ಕೆಟ್ಟ ಅಭಿಪ್ರಾಯ ಪ್ರಯತ್ನ ಮಾಡ್ತಿದಾರೆ. ರಾಜ್ಯದಲ್ಲಿ ಬರ ಪರಿಹಾರಕ್ಕೆ ಸಹಕಾರ ನೀಡ್ತಿಲ್ಲ. ಯಾವುದೇ ಅಪಪ್ರಚಾರ ಮಾಡಿದರೂ 136 ಶಾಸಕರನ್ನು ಗೆಲ್ಲಿಸಿದ ರಾಜ್ಯದ ಜನ ಇವರ ಕುತಂತ್ರ ಅರ್ಥ ಮಾಡ್ತಾರೆ ಮತ್ತು ಐದೂ ವರ್ಷ ಅಧಿಕಾರ ಕಾಂಗ್ರೆಸ್ ಅಧಿಕಾರ ನಡಸುತ್ತದೆ ಎಂದರು. ಕಾಂಗ್ರೆಸ್ ಆಗಲೂ ಬಡವರ ಪರ ಇತ್ತು ಇವತ್ತೂ ಕೂಡ ಬಡವರಿಗೆ ಪರ ಇದ್ದು ಅನೇಕ ಯೋಜನೆಗಳನ್ನು ಬಡವರಿಗಾಗಿ ಜಾರಿ ಮಾಡಿದೆ. ಕಳೆದ ಬಾರಿ ಎಲ್ಲ ನಿಗಮದ ಸಾಲ ಮನ್ನಾ ಮಾಡಿತ್ತು, ಆಶ್ರಯ ಮನೆ ಸಾಲ ಮನ್ನಾ, ವಿದ್ಯುತ್ ಬಿಲ್ ಮನ್ನಾ ಮಾಡಿ ಸಂಪರ್ಕ ನೀಡಿತ್ತು. ರೈತರ ಕೃಷಿ ಪಂಪ್ ಗೆ ಉಚಿತ ವಿದ್ಯುತ್ ಕೂಡ ಕಾಂಗ್ರೆಸ್ ಜಾರಿಗೆ ತಂದಿತ್ತು. ಭಾಗ್ಯಜ್ಯೋತಿ ನೀಡಿದ್ದು ಕೂಡ ಕಾಂಗ್ರೆಸ್, ಈಗ ಗ್ಯಾರಂಟಿಯಿಂದ ಮತ್ತೆ ಬಡವರಿಗೆ ಸಹಾಯ ಮಾಡುತ್ತಿದ್ದು ಇದರ ಪ್ರಯೋಜನ ಬಡವರು ಪಡಕೊಳ್ಳುತ್ತಿದ್ದಾರೆ ಎಂದರು ಶಕ್ತಿ ಯೋಜನೆ, ಗೃಹಜ್ಯೋತಿ ಯಶಸ್ವಿ, ಗೃಹ ಲಕ್ಷ್ಮಿಯಲ್ಲಿ ಇದ ಕೆಲವು ತಾಂತ್ರಿಕ ಸಮಸ್ಯೆಗಳನ್ನು ನಿವಾರಣೆ ಮಾಡಿದೆ. ದೇವಾಲಯಗಳಿಗೆ ನೀರು ಕರೆಂಟ್ ಬಿಲ್ ಉಚಿತ ಮಾಡಿದೆ ಇದೆಲ್ಲವೂ ಕಾಂಗ್ರೆಸ್‌ ನಿಂದ ಮಾತ್ರ ಸಾಧ್ಯವಾಗಿದ್ದು ಭವಿಷ್ಯದಲ್ಲಿ ಇನ್ನು ಅನೇಕ ಜನಪರ ಯೋಜನೆಗಳು ಜಾರಿಯಾಗಲಿವೆ ಎಂದರು. ಬಡವರಾಗಿ ನೀಡುವ ಯೋಜನೆಗಳನ್ನು ಗೇಲಿ ಮಾಡ್ತಾರೆ ಬಿಟ್ಟಿಭಾಗ್ಯ ಅಂತ ಲೇವಾಡಿ ಮಾಡ್ತಾರೆ ಅವರಂತೆ ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡಿಲ್ಲ. ಕೇಂದ್ರದಲ್ಲೂ ರಾಜ್ಯದಲ್ಲೂ ರೈತರ ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್ ಎಂದು ಬಿಜೆಪಿ ವಿರುದ್ದ ಹರಿಹಾಯ್ದರು.
    ಜಿಲ್ಲೆ ಶಾಸಕರಿಗೆ ಇಚ್ಛಾಶಕ್ತಿ ಇಲ್ಲ. ನಾವು ಯಾವತ್ತೂ ಸರ್ಕಾರ ದುಡ್ಡು ಕೊಟ್ಟಿಲ್ಲ ಅಂತ ಎಂದೂ ಹೇಳಿಲ್ಲ. ಅವರಿಗೆ ಅನುದಾನ ತರಲು ಇಚ್ಛಾಶಕ್ತಿ ಕೊರತೆ ಇದೆ ಆದ್ರೆ ಸರ್ಕಾದ ಮೇಲೆ ಗೂಬೆ ಕೂರಿಸ್ತಾರೆ ಎಂದು ಆರೋಪಿಸಿದರು.
    ರಾಜ್ಯಕ್ಕೆ ಬರಬೇಕಿದ್ದ ಜಿಎಸ್ಟಿ ಶೇರ್ ಒಂದೆಡೆ ಕೊಡ್ತಾ , ಮತ್ತೊಂದೆಡೆ ಅಕ್ಕಿ ಕೊಡದೆ ಸತಾಯಿಸ್ತಿದಾರೆ. ಕೆಲವರು ಕಾಯ್ತಿದಾರೆ ಸರ್ಕಾರ ಬೀಳ್ತದೆ ಅಂತ – ಅದು ನರಿ ಆಸೆ. ಅದರೆ ಈಡೇರದು, ಸರ್ಕಾರ ಭದ್ರವಾಗಿದೆ ಎಂದರು.
    ಮಾಜಿ ಶಾಸಕ ಜೆ ಆರ್ ಲೋಬೊ, ಕೋಡಿಜಲ್ ಇಬ್ರಾಹಿಂ, ಶಶಿಧರ ಶೆಟ್ಟಿ ಮತ್ತಿತರ ನಾಯಕರು ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply