Connect with us

KARNATAKA

ಯುವತಿ ಮೇಲೆ ಸಹೋದರರಿಂದ ಅತ್ಯಾಚಾರ: ಓರ್ವನ ಬಂಧನ

ಬೆಂಗಳೂರು, ಜನವರಿ 11: ಯುವತಿ ಮೇಲೆ ಸಹೋದರರಿಬ್ಬರು ಅತ್ಯಾಚಾರ ಎಸಗಿ ಮತಾಂತರಕ್ಕೆ ಬಲವಂತ ಮಾಡಿರುವ ಆರೋಪ ಕೇಳಿಬಂದಿದ್ದು, ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾರೆ.

19 ವರ್ಷದ ಯುವತಿ ನೀಡಿದ ದೂರು ಆಧರಿಸಿ ಶಬ್ಬಿರ್ ಅಹಮ್ಮದ್ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಸಹೋದರ ಮೊಹಮ್ಮದ್ ರಿಲ್ವಾನ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ಬೆಂಗಳೂರಿನ ಸ್ಪಾ ಒಂದರಲ್ಲಿ ಯುವತಿ ಕೆಲಸ ಮಾಡುತ್ತಿದ್ದು 2018 ರಲ್ಲಿ ಅಲ್ಲಿಗೆ ಆಗಾಗ ಬರುತ್ತಿದ್ದ ಶಬ್ಬೀರ್ ಅಹಮ್ಮದ್ ಪರಿಚಯವಾಗಿದ್ದ. ಬ್ರಿಗೇಡ್ ರಸ್ತೆಯ ಹೋಟೆಲ್ ನಲ್ಲಿ ಕೆಲಸಕ್ಕೆ ಸೇರಿಸಿ ಆಕೆಯನ್ನು ಹೋಟೆಲ್ ರೂಮ್ ಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ. ಯಾರಿಗಾದರೂ ವಿಷಯ ತಿಳಿಸಿದರೆ ಕೆಲಸದಿಂದ ತೆಗೆಯುವುದಾಗಿ, ಪೋಷಕರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದಲ್ಲದೆ, ಆಸಿಡ್ ಹಾಕುವುದಾಗಿಯೂ ಆರೋಪಿ ಬೆದರಿಸಿದ್ದು, 2019 ರ ವರೆಗೆ 4 ಸಲ ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

2019 ರ ಫೆಬ್ರವರಿಯಲ್ಲಿ ಶಬ್ಬೀರ್ ಸಹೋದರ ರಿಲ್ವಾನ್, ಇನ್ನು ಮುಂದೆ ಅಣ್ಣ ನಿನ್ನ ತಂಟೆಗೆ ಬರುವುದಿಲ್ಲ ಎಂದು ಯುವತಿಯ ಸ್ನೇಹ ಬೆಳೆಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಇಚ್ಚೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ್ದಾನೆ. ಯುವತಿಯ ಪೋಷಕರಿಂದ 1.50 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದಾನೆ. ತನ್ನ ಪೋಷಕರಿಗೆ ಇಷ್ಟವಿಲ್ಲದಿದ್ದರೂ ಯುವತಿಯ ಬಲವಂತಕ್ಕೆ ಪೋಷಕರು ಮದುವೆ ಮಾಡಿಕೊಡಲು ಒಪ್ಪಿಕೊಂಡಿದ್ದಾರೆ.

ನಿಶ್ಚಿತಾರ್ಥ ಮಾಡಿಕೊಂಡಿದ್ದ ರಿಲ್ವಾನ್ ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಬಲವಂತ ಮಾಡಿದ್ದು ಒಪ್ಪದಿದ್ದಾಗ ದೂರವಾಗಿದ್ದಾನೆ. ಕಂಗಾಲಾದ ಯುವತಿ ಆತನ ಪರಿಚಿತರ ಬಳಿ ವಿಚಾರಿಸಿದಾಗ 2020 ರ ಸೆಪ್ಟಂಬರ್ 14ರಂದು ಬೇರೆ ಯುವತಿಯೊಂದಿಗೆ ಆತ ಮದುವೆಯಾಗಿರುವುದು ಗೊತ್ತಾಗಿದೆ. ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ ಎನ್ನಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *