Connect with us

LATEST NEWS

ಮಂಗಳೂರಿನಲ್ಲಿ ಮತ್ತೆ ಕಾಗೆಗಳ ಸಾವು..ಹಕ್ಕಿ ಜ್ವರ ಆತಂಕ

ಮಂಗಳೂರು ಜನವರಿ 11: ಈಗಾಗಲೇ ದೇಶದಾದ್ಯಂತ ಹಕ್ಕಿ ಜ್ವರದ ಆತಂಕ ಮನೆಮಾಡಿರುವ ಸಂದರ್ಭದಲ್ಲಿ ನಗರದ ಹೊರವಲಯದ ವಾಮಂಜೂರಿನ ಪಚ್ಚನಾಡಿ ಸಮೀಪ ಮೂರು ಕಾಗೆಗಳು ಸತ್ತು ಬಿದ್ದಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ

ಪಚ್ಚನಾಡಿ ಡಂಪಿಂಗ್ ಯಾರ್ಡ್ ಸಮೀಪ ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ ಮೂರು ಕಾಗೆಗಳು ಸತ್ತು ಬಿದ್ದಿರುವುದು ಸೋಮವಾರ ಬೆಳಿಗ್ಗೆ ಕಂಡುಬಂದಿದೆ. ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಕಾಗೆಗಳ ದೇಹದ ಮಾದರಿಯನ್ನು ಸಂಗ್ರಹಿಸಿದ್ದಾರೆ.