Connect with us

FILM

ರಣ್ ವೀರ್ ಸಿಂಗ್ ಜೊತೆ ಎಂಗೇಜ್ ಆದ ಕರಾವಳಿ ಕನ್ನಡತಿ ದೀಪಿಕಾ ಪಡುಕೋಣೆ 

    ರಣ್ ವೀರ್ ಸಿಂಗ್ ಜೊತೆ ಎಂಗೇಜ್ ಆದ ಕರಾವಳಿ ಕನ್ನಡತಿ ದೀಪಿಕಾ ಪಡುಕೋಣೆ  

ಮುಂಬೈ ಜನವರಿ 06 : ಪದ್ಮಾವತಿ ಖ್ಯಾತಿಯ ಕನ್ನಡತಿ ದೀಪಿಕಾ ಪಡುಕೋಣೆಯ ಹಾರ್ಟ್ ಬ್ರೇಕಿಂಗ್ ನ್ಯೂಸ್‍ವೊಂದು ಬಾಲಿವುಡ್‍ನಲ್ಲಿ ತುಂಬಾ ಹರಿದಾಡುತ್ತಿದೆ.

ದೀಪಿಕಾ ಪಡುಕೋಣೆ ತನ್ನ ಬಹುದಿನ ಬಾಯ್ ಫ್ರೆಂಡ್ ರಣ್‍ವೀರ್ ಸಿಂಗ್ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ಶ್ರೀಲಂಕಾದಲ್ಲಿ ರಣವೀರ್ ಸಿಂಗ್ ಜೊತೆ ಹೊಸ ವರ್ಷವನ್ನು ಸ್ವಾಗತಿಸಿರುವ ದೀಪಿಕಾ ಶೀಘ್ರವೇ ಅಲ್ಲೇ ಎಂಗೇಜ್ ಆಗಲಿದ್ದಾರಂತೆ.

ನಟಿ ದೀಪಿಕಾ ಪಡುಕೋಣೆ ಶುಕ್ರವಾರ 32ನೇ ವರ್ಷಕ್ಕೆ ಕಾಲಿಟ್ಟೀದಾರೆ. ಅವರು ಮುಟ್ಟಿದ್ದೆಲ್ಲವೂ ಚಿನ್ನ.

ಸಾಲು ಸಾಲು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡ ದೀಪಿಕಾ, 2013ರಲ್ಲಿ ತೆರೆಕಂಡ ‘ರಾಮ್ ಲೀಲಾ’ ಚಿತ್ರದ ಮೂಲಕ ಹೊಸ ಮಾದರಿಯ ಸಿನಿಮಾಗಳಿಗೆ ತೆರೆದುಕೊಂಡರು.

ಈ ಚಿತ್ರದ ಶೂಟಿಂಗ್ ವೇಳೆ ದೀಪಿಕಾ ಹಾಗೂ ರಣವೀರ್ ಸಿಂಗ್ ನಡುವೆ ಪ್ರೀತಿ ಚಿಗುರಿತ್ತು.

ಹೀಗೆ ಆರಂಭವಾದ ಪ್ರೀತಿಗೆ ಹೊಸ ಅರ್ಥ ನೀಡಲು ಜೋಡಿ ಮುಂದಾಗಿದೆಯಂತೆ! ಹೀಗೆ ಕುತೂಹಲ ಹುಟ್ಟಿಸಿರೋ ಈ ಪ್ರಣಯ ಪಕ್ಷಿಗಳು ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರಾ?

ಅಂದಹಾಗೆ ಇದಕ್ಕೆ ಕಾರಣವಾಗಿರೋದು ದೀಪಿಕಾ ಇತ್ತೀಚೆಗೆ ಕಾಣಿಸಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಕೆಯ ಎಡಗೈನ ಬೆರಳಲ್ಲಿ ಧರಿಸಿದ್ದ ಉಂಗುರ.

ಸದಾ ತಮ್ಮ ಇಷ್ಟದ ನಟಿಯ ಮೇಲೊಂದು ಕಣ್ಣಿಟ್ಟಿರೋ ಅಭಿಮಾನಿಗಳು ಈ ರಿಂಗು ನೋಡಿದ್ದೇ ಸಾಮಾಜಿಕ ಜಾಲ ತಾಣಗಳಲ್ಲಿ ದೀಪಿಕಾ ಎಂಗೇಜ್ ಮೆಂಟ್ ಆಗಿದೆ ಎಂಬಂಥಾ ಸುದ್ದಿ ಹರಿ ಬಿಡುತ್ತಿದ್ದಾರೆ.

ದೀಪಿಕಾ ಎಂಗೇಜ್‌ಮೆಂಟ್ ರಿಂಗ್ ಧರಿಸೋ ಬೆರಳಿಗೆ ಸದರಿ ಉಂಗುರ ಧರಿಸಿದ್ದಾಳೆಂಬ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ!.

ಹೊಸ ವರ್ಷದ ಆಚರಣೆಗೆ ಶ್ರೀಲಂಕಾಕ್ಕೆ ತೆರಳಿರುವ ಈ ಜೋಡಿ ಅಲ್ಲಿಯೇ ದೀಪಿಕಾ ಜನ್ಮದಿನ ಆಚರಿಸಿಕೊಳ್ಳಲು ಸಿದ್ಧತೆ ನಡೆಸಿತ್ತು.

ಈಗ ಕೇಳಿ ಬರುತ್ತಿರುವ ಮಾತೇನೆಂದರೆ ಇಬ್ಬರೂ ಅಲ್ಲಿಯೇ ಎಂಗೇಜ್​ವೆುಂಟ್ ಮಾಡಿಕೊಳ್ಳಲು ನಿರ್ಧರಿಸಿದ್ದಾರಂತೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದಕ್ಕೆ ಅವರೇ ಉತ್ತರಿಸಬೇಕಿದೆ.

ಈ ವರ್ಷ ದೀಪಿಕಾ ಹಾಗೂ ರಣವೀರ್ ಮದುವೆಯಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಈ ಹಿನ್ನೆಲೆಯಲ್ಲಿ ದೀಪಿಕಾ ಪಾಲಕರೊಂದಿಗೆ ರಣವೀರ್ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಆದರೆ ಈ ಜೋಡಿ ಎಲ್ಲಿಯೂ ಈ ಪುಕಾರುಗಳಿಗೆ ಸ್ಪಷ್ಟನೆ ನೀಡಿಲ್ಲ.

ಮದುವೆ ವಿಚಾರದಲ್ಲಿ ರಣವೀರ್ ಮತ್ತು ದೀಪಿಕಾ ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಹಾಗೂ ನಟಿ ಅನುಷ್ಕಾ ಶರ್ಮಾ ಮಾರ್ಗವನ್ನೇ ಅನುಸರಿಸಲಿದ್ದಾರಾ ಎಂಬುದು ಅಭಿಮಾನಿಗಳ ಸದ್ಯದ ಪ್ರಶ್ನೆಯಾಗಿದೆ.

ಕರಾವಳಿ ಮೂಲದ ದೀಪಿಕ ಪಡುಕೋಣೆ , ಖ್ಯಾತ ಬ್ಯಾಟ್ ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರ ಪುತ್ರಿ.

ಮಾಡೆಲಿಂಗ್ ಮೂಲಕ ತನ್ನ ವೃತ್ತಿ ಆರಂಭಿಸಿದ್ದ ದೀಪಿಕಾ ಪಡುಕೋಣೆ ಕನ್ನಡ ಚಿತ್ರ ‘ಐಶ್ವರ್ಯಾ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ ಅವರು, ‘ಓಂ ಶಾಂತಿ ಓಂ’ ಚಿತ್ರದ ಮೂಲಕ ಬಾಲಿವುಡ್ ಕಡೆ ಮುಖ ಮಾಡಿದರು.

ಇತ್ತೀಚೆಗೆ ವಿವಾದವಾಗಿರುವ ಮತ್ತು ಚರ್ಚೆಯಲ್ಲಿರುವ ಹಿಂದೀ ಚಲನ ಚಿತ್ರ ಪದ್ಮಾವತಿಯ ಪಾತ್ರವನ್ನು ದೀಪಿಕಾ ಅವರು ನಿಭಾಯಿಸಿದ್ದಾರೆ.