Connect with us

    BANTWAL

    ಪಣೋಲಿ ಬೈಲು ದೇವಸ್ಥಾನದ ಅನುವಂಶಿಕ ಎರಡನೇ ಅರ್ಚಕ ರಮೇಶ್‌ ಮೂಲ್ಯ ನಿಧನ

    ಬಂಟ್ವಾಳ,ಅಕ್ಟೋಬರ್ 21: ಪಣೋಲಿ ಬೈಲು ದೇವಸ್ಥಾನದ ಅನುವಂಶಿಕ ಎರಡನೇ ಅರ್ಚಕ ರಮೇಶ್‌ ಮೂಲ್ಯ (55)ಅವರು ಇಂದು ಬೆಳಿಗ್ಗೆ ಮಂಗಳೂರು ಖಾಸಗಿ ಆಸ್ಪತ್ರೆಯ ಲ್ಲಿ ನಿಧನರಾಗಿದ್ದಾರೆ.

    ಅವರು ಕಳೆದ ಎರಡು ವಾರಗಳಿಂದ ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯ ಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರು ನಿನ್ನೆ ರಾತ್ರಿಯಿಂದ ಚಿಕಿತ್ಸೆ ಗೆ ಸ್ಪಂದಿಸಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.

    ಪತ್ನಿ ಮತ್ತು ಎರಡು ಗಂಡು ಒಂದು ಹೆಣ್ಣು ಹಾಗೂ ಮೊಮ್ಮಗಳು ಮತ್ತು ಅಪಾರ ಬಂಧುಗಳನ್ನು ಅವರು ಅಗಲಿದ್ದಾರೆ. ರಮೇಶ್ ಅವರ ಪಾರ್ಥಿವ ಶರೀರವನ್ನು ಅವರ ಪಣೋಲಿಬೈಲಿನಲ್ಲಿರುವ ಮನೆಗೆ 10.30 ರ ವೇಳೆ ತರಲಿದ್ದು ಬಳಿಕ ಕಂಚಿನಡ್ಕ ಪದವಿನ ಸ್ಮಶಾನ ಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯುತ್ತದೆ ಎಂದು ಅವರ ಮಗ ಲೋಹಿತ್ ಪಣೋಲಿಬೈಲು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply