Connect with us

    LATEST NEWS

    ಸುಳ್ಯದ ಐವರ್ನಾಡಿನಲ್ಲಿ ರಾಮಾಯಣಕ್ಕೆ ಅವಮಾನ

     ಸುಳ್ಯದ ಐವರ್ನಾಡಿನಲ್ಲಿ ರಾಮಾಯಣಕ್ಕೆ ಅವಮಾನ

    ಸುಳ್ಯ, ಸೆಪ್ಟೆಂಬರ್ 25 : ಸುಳ್ಯದ ಐವರ್ನಾಡಿನಲ್ಲಿ  ದಸರಾ ಕಾರ್ಯಕ್ರಮದ ಅಂಗವಾಗಿ ಇಲ್ಲಿಯ ಯುವಶಕ್ತಿ ಎಂಬ  ಸಂಘಟನೆ ಪ್ರದರ್ಶಿಸಿದ್ದ ರಾಮಾಯಣ ಯಕ್ಷಗಾನ ಪ್ರಸಂಗವನ್ನು ಅಪಮಾನ ಮಾಡಿದ ಘಟನೆ ವರದಿಯಾಗಿದೆ .

    ಈ ಯಕ್ಷಗಾನ ಪ್ರಸಂಗದಲ್ಲಿ ಶ್ರೀ ರಾಮ ಹಾಗು ಸೀತಾದೇವಿ ಯನ್ನು ಹಾಸ್ಯಾಸ್ಪದ  ರೀತಿಯಲ್ಲಿ ತೋರಿಸಲಾಗಿದೆ. ಪವಿತ್ರ ಗೃಂಥ ರಾಮಾಯಣಕ್ಕೆ  ಕಲಾವಿದರು ಅಪಚಾರ ಎಸಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.

    ಈ ಯಕ್ಷಗಾನ ಪ್ರಸಂಗದ ವಿಡಿಯೋ ತುಣುಕೊಂದರಲ್ಲಿ ಅಶೋಕವನದಲ್ಲಿ ಬಂಧನದಲ್ಲಿರುವ ಸೀತಾದೇವಿ , ಶ್ರೀರಾಮನನ್ನು ನೆನೆಯುವ ಪ್ರಸಂಗ ಪ್ರದರ್ಶಿಸಲಾಗಿದೆ . ಅಶೋಕವನದಲ್ಲಿ ರಾಕ್ಷಸರ ನಡುವೆ ಬಂಧನದಲ್ಲಿರು ಸೀತಾದೇವಿ ಮನದಾಳದ ತೊಳಲಾಟ ವನ್ನು ಅತ್ಯಂತ ಹಾಸ್ಯಾಸ್ಪದವಾಗಿ ಪ್ರದರ್ಶಿಸಲಾಗಿದೆ .

    ಸೀತಾದೇವಿಯ ಪ್ರಾತ್ರ ಮಾಡಿದ ಕಲಾವಿದನ ಮಾತು “ಶ್ರೀರಾಮನನ್ನು ಸಂಪರ್ಕಿಸಲು ಮೊಬೈಲ್ ನೆಟ್ ವರ್ಕ್ ಸಿಗುತ್ತಿಲ್ಲ.

    ವಾಟ್ಸಪ್ ನಲ್ಲಿ ಚಾಟ್ ಮಾಡೋಣ ಅಂದರೆ ಇಂಟರ್ನೆಟ್ ಇಲ್ಲ . ಫೇಸ್ ಬುಕ್ ನಲ್ಲಿ ಕಮೆಂಟ್ ಲೈಕ್ ಮಾಡೋಣ ಅಂದರೆ ಇಂಟರ್ ನೆಟ್ ಇಲ್ಲ . ವೈಫೈ ಯಂತೂ ಇಲ್ಲವೇ ಇಲ್ಲ.” ಇಂಥಹ ಅವಹೇಳನಕಾರಿ ಸನ್ನಿವೇಶಗಳನ್ನು ಸಂಭಾಷಣೆಗಳನ್ನು ಹಾಕಲಾಗಿದೆ.

    ಯಕ್ಷಗಾನ ಪ್ರಸಂಗದ ಇನ್ನೊಂದು ಸನ್ನಿವೇಶದಲ್ಲಿ ಶ್ರೀರಾಮ ತನ್ನ ಸಹೋದರ ಲಕ್ಷ್ಮಣ ನೊಂದಿಗೆ ಮೊಬೈಲ್ ನಲ್ಲಿ ನಡೆಸುವ ಸನ್ನಿವೇಶವನ್ನು  ಅಪಹಾಸ್ಯ ಮಾಡುವ ರೀತಿಯಲ್ಲಿ ಪ್ರದರ್ಶಿಸಲಾಗಿದೆ.

    ಸುಳ್ಯದಲ್ಲಿ ನಡೆದ ಈ ಯಕ್ಷಗಾನ ಪ್ರದರ್ಶನಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಯಕ್ಷಗಾನ ಪ್ರದರ್ಶನದ ವಿವಾದ ಈಗ ರಾಜಕೀಯ ಸಂಘರ್ಷಕ್ಕೂ ವೇದಿಕೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ . ಈ ಯಕ್ಷಗಾನ ಪ್ರದರ್ಶನದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಸುಳ್ಯದ ಕಾಂಗ್ರೇಸ್ ಮುಖಂಡ ವೆಂಕಪ್ಪ ಗೌಡ ಈ ವಿವಾದಾತ್ಮಕ  ಯಕ್ಷಗಾನ ಪ್ರದರ್ಶಿಸಿದ ಯುವಶಕ್ತಿ ಸಂಘಟನೆಯ  ಗೌರವಾಧ್ಯಕ್ಷರಾಗಿದ್ದಾರೆ.

    ಸೆಪ್ಟೆಂಬರ್ 23 ರಂದು ಸುಳ್ಯದ ಐವರ್ನಾಡಿನಲ್ಲಿ ದಸರಾ ಕಾರ್ಯಕ್ರಮದ ಅಂಗವಾಗಿ ಈ ಯಕ್ಷಗಾನ ಪ್ರದರ್ಶನ ನಡೆದಿತ್ತು . ಈ ದಸರಾ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಚಾಲನೆ ನೀಡಿದ್ದರು .

    Share Information
    Advertisement
    Click to comment

    You must be logged in to post a comment Login

    Leave a Reply