LATEST NEWS
ರಮಾನಾಥ ರೈಗೆ ಕಂಟಕವಾದ ಚಕ್ರವರ್ತಿ ಸೂಲಿಬೆಲೆ ನಿಂದನಾತ್ಮಕ ಹೇಳಿಕೆ
ರಮಾನಾಥ ರೈಗೆ ಕಂಟಕವಾದ ಚಕ್ರವರ್ತಿ ಸೂಲಿಬೆಲೆ ನಿಂದನಾತ್ಮಕ ಹೇಳಿಕೆ
ಮಂಗಳೂರು ಸೆಪ್ಟೆಂಬರ್ 28: ಖ್ಯಾತ ಅಂಕಣಕಾರ ಹಾಗೂ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸಚಿವ ರಮಾನಾಥ್ ರೈ ವಿವಾದಾತ್ಮಕ ಹೇಳಿಕೆ ಈಗ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್ ಸಚಿವ ರಮಾನಾಥ್ ರೈ ವಿರುದ್ಧ ಮಂಗಳೂರು ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಿಸಿದ್ದರು.
ಈ ಕುರಿತು ಪ್ರಕರಣವನ್ನು ಕೈಗೆತ್ತಿಕೊಂಡ ಮಂಗಳೂರಿನ ಜೆಎಂಎಫ್ ಸಿ ಎರಡನೇ ನ್ಯಾಯಾಲಯವು ಪ್ರಕರಣದ ವಿಚಾರಣೆಗೆ ಅನುಮತಿ ನೀಡಿದೆ. ಭಾರತೀಯ ದಂಡ ಸಂಹಿತೆ 500, 504 ರ ಅಡಿಯಲ್ಲಿ ಸಚಿವ ರಮಾನಾಥ್ ರೈ ವಿರುದ್ಧ ಫಿರ್ಯಾದುದಾರ ಮತ್ತು ಅವರ ಸಾಕ್ಷ್ಯಗಳ ವಿಚಾರಣೆ ಯನ್ನು 10/10/17 ಕ್ಕೆ ಮುಂದೂಡಿದೆ.
ಪ್ರಕರಣದ ಕುರಿತು ಇಂದು ವಾದ ವಿವಾದ ಆಲಿಸಿದ ನ್ಯಾಯಾಲಯ ಮಾನನಷ್ಟಕ್ಕೆ ನೊಂದ ವ್ಯಕ್ತಿ ಚಕ್ರವರ್ತಿ ಸೂಲಿಬೆಲೆ ಆಗಿದ್ದರೂ ರಹೀಂ ಉಚ್ಚಿಲ್ ದೂರು ದಾಖಲಿಸಲು ಕಾನೂನಲ್ಲಿ ಅವಕಾಶ ಅವಕಾಶವಿದೆಯೇ ? ಮತ್ತು ಸಚಿವರೊಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಸರ್ಕಾರದ ಪೂರ್ವಾನುಮತಿ ಅವಶ್ಯಕತೆ ಇದೆ ಎಂಬ ಕುರಿತು ನ್ಯಾಯಾಲಯ ಆಳವಾಗಿ ವಿಚಾರಣೆ ಕೈಗೊಂಡಿತ್ತು.
ಪ್ರಕರಣದ ಫಿರ್ಯಾದುದಾರ ರಹಿಂ ಉಚ್ಚಿಲ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ದಾಖಲೆಗಳು ಪರಿಶೀಲಿಸಿದ ನ್ಯಾಯಾಲಯ, ರಹಿಂ ಉಚ್ಚಿಲ್ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರ ಮಧ್ಯೆ ಭಾವನಾತ್ಮಕ ಮತ್ತು ಸ್ನೇಹ ಸಂಬಂಧವಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಮುಂದಕ್ಕೆ ಕೊಂಡೊಯ್ಯುವ ಮಹತ್ವದ ನಿರ್ಧಾರವನ್ನು ನ್ಯಾಯಾಲಯ ತೆಗೆದುಕೊಂಡಿದೆ .
You must be logged in to post a comment Login