BANTWAL
ಸರಕಾರ ಬಡವರ ಮನೆಗೆ ಉಚಿತ ಪಡಿತರ ತಲುಪಿಸಲಿ- ಮಾಜಿ ಸಚಿವ ರಮಾನಾಥ ರೈ ಸಲಹೆ

ಸರಕಾರ ಬಡವರ ಮನೆಗೆ ಉಚಿತ ಪಡಿತರ ತಲುಪಿಸಲಿ- ಮಾಜಿ ಸಚಿವ ರಮಾನಾಥ ರೈ ಸಲಹೆ
ಬಂಟ್ವಾಳ ಮಾರ್ಚ್ 31: ಅಕ್ಕಿಯ ಜೊತೆಗೆ ಎಲ್ಲಾ ದಿನಬಳಕೆಯ ವಸ್ತುಗಳನ್ನು ಉಚಿತವಾಗಿ ಸರಕಾರ ಬಡವರ ಪ್ರತಿ ಮನೆಗೂ ಪಡಿತರ ವ್ಯವಸ್ಥೆ ಕಲ್ಪಿಸುವ ಕಾರ್ಯ ಶೀಘ್ರ ಆಗಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಸಲಹೆ ನೀಡಿದ್ದಾರೆ.
ಕೊರೋನಾ ಎಂಬ ಮಾರಣಾಂತಿಕ ಕಾಯಿಲೆಗೆ ಜನಜೀವನ ತತ್ತರಿಸಿದ್ದು,ಇದರ ನಿಗ್ರಹಕ್ಕೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳಿಗೆ ನಮ್ಮ ಸಹಕಾರವೂ ಇದೆ ಎಂದ ಅವರು, ಇದರ ಜೊತೆಗೆ ಜನತೆಯ ಹಸಿವನ್ನುನೀಗಿಸುವ ಉದ್ದೇಶದಿಂದ ನೆರೆಯ ಕೇರಳ ಸರಕಾರ ನೀಡಿರುವ ಉಚಿತರ ಪಡಿತರ ವ್ಯವಸ್ಥೆಯನ್ನು ರಾಜ್ಯದಲ್ಲೂ ಅನುಷ್ಠಾನಗೊಳಿಸುವಂತೆ ಆಗ್ರಹಿಸಿದರು.
