ಮೀನುಗಾರರು ಪ್ಯಾಕೇಜ್ ಘೋಷಣೆಗೆ ಬೇಡಿಕೆ ಇಟ್ಟಿದ್ದು, ಸದ್ಯ ರೇಷನ್ ಸಹಿತ ಮೂಲಭೂತ ವ್ಯವಸ್ಥೆಯನ್ನಷ್ಟೇ ಮಾಡಬಹುದು – ಕೋಟ

ಉಡುಪಿ ಮಾರ್ಚ್ 31: ಕೊರೊನಾ ಲಾಕ್ ಡೌನ್ ನಿಂದಾಗಿ ಕರಾವಳಿಯ ಮೀನುಗಾರರು ಸಂಕಷ್ಟದಲ್ಲಿದ್ದು, ಮೀನುಗಾರರು ಪ್ಯಾಕೇಜ್ ಘೋಷಣೆಗೆ ಬೇಡಿಕೆಯಿರಿಸಿದ್ದಾರೆ ಆದರೆ ಈಗ ರೇಷನ್ ಸಹಿತ ಮೂಲಭೂತ ವ್ಯವಸ್ಥೆಯನ್ನಷ್ಟೇ ಮಾಡಬಹುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆ ನಡೆಸಲು ಬೇಡಿಕೆ ಇಟ್ಟಿದ್ದು, ವೈಯ್ಯಕ್ತಿಕವಾಗಿ ಒಬ್ಬರೇ ತೆರಳಿ ಮೀನು ಹಿಡಿಯಬಹುದೇ ಎಂದು ಮೀನುಗಾರರು ಕೇಳ್ತಿದ್ದಾರೆ, ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೂರು ದಿನ ಕಟ್ಟು ನಿಟ್ಟಿನ ಕರ್ಫ್ಯೂ ಪಾಲಿಸಲಾಗಿದ್ದು, ಇಂದು ದಿನಸಿ, ಹಾಲು ಖರೀದಿಗೆ ಅವಕಾಶ ನೀಡಲಾಗಿದೆ. ಅಲ್ಲದೆ ಇವತ್ತು ಒತ್ತಡ ಹೆಚ್ಚಾಗಿ ಜನರು ಹೊರ ಬಂದಿರುವುದು‌ ನಿಜ. ಜನರ ಒತ್ತಡ ನಿಭಾಯಿಸಿ ಸೂಕ್ತ ತೀರ್ಮಾನ ಕೈಗೊಳ್ತೇವೆ ಎಂದರು ಜನರು ಅವಶ್ಯಕ ಸಾಮಾಗ್ರಿ ಒಡೆಯಲು ರಸ್ತೆಗೆ ಬಂದಿದ್ದು ಕೆಲವೊಂದು ಕಡೆ ಸಮಸ್ಯೆ ಆಗಿದ್ದು ನಿಜ ಎಂದರು. ಈ ಒತ್ತಡವನ್ನು ಕಡಿಮೆ ಮಾಡಲು ಅಗತ್ಯ ಬಿದ್ರೆ ಇನ್ನಷ್ಟು ಸಡಿಲ ಮಾಡಲು ಯತ್ನಿಸಲಾಗುವುದು, ಅಲ್ಲದೆ ಶಾಂತಿಯುತವಾಗಿ ವಹಿವಾಟಿಗೆ ಕ್ರಮಕೈಗೊಳ್ಳಲಾಗುವುದು ಎಂದರು.