Connect with us

    DAKSHINA KANNADA

    ರಾಮ ಮಂದಿರ ಲೋಕಾರ್ಪಣೆ ಹೆಮ್ಮೆ ವಿಚಾರ ಆದ್ರೆ ಬಿಜೆಪಿ ಮಾಡೋ ರಾಜಕೀಯ ಖೇದಕರ‌ :ಪದ್ಮರಾಜ್ ಆರ್

    ಮಂಗಳೂರು : ಜ.22ರಂದು ರಾಮ ಮಂದಿರ ಲೋಕಾರ್ಪಣೆ ಹೆಮ್ಮೆ ವಿಚಾರ. ಶ್ರದ್ಧಾ ಭಕ್ತಿಯಿಂದ ಆಚರಿಸಬೇಕಾದ ಕಾರ್ಯಕ್ರಮವನ್ನು ಬಿಜೆಪಿಯವರು ರಾಜಕೀಯ ಮಾಡೋದು ಖೇದಕರ‌ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಹೇಳಿದ್ದಾರೆ.

    ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅಯೋಧ್ಯೆ ವಿವಾದ ಹಿಂದೆ ಇತ್ತು, ಕೋರ್ಟ್ ಇತ್ಯರ್ಥ ಆಗಿದೆ, ಅದನ್ನು ಪಾಲಿಸುವುದು ಎಲ್ಲರ ಕರ್ತವ್ಯ, ಆ ಹಿನ್ನೆಲೆಯಲ್ಲಿ ರಾಮಮಂದಿರ ನಿರ್ಮಾಣ ಆಗಿದೆ. ಇದರಲ್ಲಿ ‌ರಾಜಕೀಯ ಮಾಡುವ ಔಚಿತ್ಯವೇನು? ಎಂದು ಪ್ರಶ್ನೆ ಮಾಡಿದ ಅವರು ಬಿಜೆಪಿಯವರು ಅವಿದ್ಯಾವಂತರು ಮಾತನಾಡುವ ರೀತಿ ಬೇರೆ ಬೇರೆ ರೀತಿ ವ್ಯಾಖ್ಯಾನ ಮಾಡ್ತೀರಿ. ರಾಮ ಭಕ್ತರ ಮೇಲೆ ಕೈ ಸರ್ಕಾರಕ್ಕೆ ಕೋಪವೇಕೆ ಎನ್ನುತ್ತಾರೆ. ಎಲ್ಲಿಂದ ಎಲ್ಲಿಗೆ ಕನೆಕ್ಟ್ ಮಾಡ್ತೀರಿ? ಹುಬ್ಬಳ್ಳಿಯಲ್ಲಿ ಇಬ್ಬರ ಮೇಲೆ LPC – ಲಾಂಗ್ ಪೆಂಡಿಂಗ್ ಕೇಸ್ ಅಂತ ಪೆಂಡಿಂಗ್ ಇಟ್ಟಿದ್ರು. ಅವರ ಮೇಲೆ ಕ್ರಿಮಿನಲ್ ಪ್ರಕರಣ ಇತ್ತು. ಕೋರ್ಟ್ ಆಜ್ಞೆ ಪ್ರಕಾರ ವಾರಂಟ್ ಇರುವಾಗ ಬಂಧಿಸಲಾಗಿದೆ. ಇದರಲ್ಲಿ ರಾಜಕೀಯ ಹೇಗೆ? ಸಾಮಾನ್ಯ ಜ್ಞಾನ ಇರಬೇಕು. ಯಾಕೆ ನಿಮ್ಮ ಸರ್ಕಾರ ಇತ್ತಲ್ಲ, ಪ್ರಕರಣ ಮುಗಿಸಬಹುದಿತ್ತಲ್ಲ, ಜನ ಮೆಚ್ಚುವ ಕೆಲಸ ಮಾಡಿ, ಮಂಗಳೂರಲ್ಲಿ ಎಲ್ಲ ಅಗೆದು ಹಾಕಿದ್ದಾರೆ, ಇದರ ಬಗ್ಗೆ ಗಮನ ಹರಿಸ್ತಿದೀರಾ? ಅದು ಬಿಟ್ಟು ಜನರ ನಡುವೆ ಕಂದಕ ಸೃಷ್ಟಿಸಿದ್ರೆ ರಾಮ ಮೆಚ್ಚಲ್ಲ ಎಂದು ಬಿಜೆಪಿ ವಿರುದ್ದ ಕಿಡಿ ಕಾರಿದ್ರು.
    ರಜೆ ಘೋಷಣೆ ಒತ್ತಾಯ ವಿಚಾರ- ಕೇಂದ್ರದ ವತಿಯಿಂದ ಕಾರ್ಯಕ್ರಮ ನಡಿತಿದೆ, ಕೇಂದ್ರವೇ ಘೋಷಿಸಲಿ, ವಿಷಯ ಅರಿತು ಸರಿಯಾಗಿ ಮಾತನಾಡಿ.ಆಂಜನೇಯ ಹೇಳಿಕೆ ಗಮನಿಸಿಲ್ಲ. ಪಕ್ಷದ ಮುಖಂಡರ ಹೇಳಿಕೆಗೆ ಎಲ್ಲರೂ ಬದ್ಧವಾಗಿರಬೇಕು. ಎಲ್ಲರೂ ಭಕ್ತಿಪೂರ್ವಕ ಆಚರಣೆ ಮಾಡಲು ಪಕ್ಷದಿಂದ ನಮಗೆ ಸೂಚನೆ ಬಂದಿದೆ. ಮುಜರಾಯಿ ದೇವಾಲಯಗಳಲ್ಲೂ ಪೂಜೆ ನಡೆಯಲಿದೆ. ಹಾಗೇ ಮಾಡ್ತೇವೆ.ಸಿಎಂ ಅವರು ರಾಮಮಂದಿರ ಸ್ವಾಗತ ಮಾಡಿ ಜನರಿಗೆ ಮೆಸೆಜ್ ನೀಡಿದ್ದಾರೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply