Connect with us

LATEST NEWS

ಮಂಗಳೂರು ಮೂಲದ ಡಾ.ಕೆ.ನಾರಾಯಣ್ ಗೆ ಬಿಜೆಪಿ ರಾಜ್ಯಸಭಾ ಟಿಕೆಟ್

ಬೆಂಗಳೂರು ನವೆಂಬರ್ 17: ರಾಜ್ಯಸಭಾ ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ ಮತ್ತೆ ಅಚ್ಚರಿಯ ಹೆಸರನ್ನು ಆಯ್ಕೆ ಮಾಡಿದ್ದು, ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಮತ್ತೊಮ್ಮೆ ಶಾಕ್ ನೀಡಿದೆ.


ಪಕ್ಷಕ್ಕೆ ಸಂಬಂಧಿಸಿದ ಕರಪತ್ರಗಳನ್ನು ಮುದ್ರಿಸುತ್ತಿದ್ದ ಸಾಮಾನ್ಯ ಕಾರ್ಯಕರ್ತರಾಗಿರುವ ಡಾ.ಕೆ.ನಾರಾಯಣ್ ಅವರಿಗೆ ರಾಜ್ಯಸಭಾ ಅಭ್ಯರ್ಥಿಯನ್ನಾಗಿ ಬಿಜೆಪಿ ಮಾಡಿದೆ. ಅಶೋಕ್ ಗಸ್ತಿ ನಿಧನದಿಂದ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಮಾಜಿ ಎಂಎಲ್ ಸಿ ಶಂಕರಪ್ಪ ಮತ್ತು ಅಶೋಕ್ ಗಸ್ತಿ ಪತ್ನಿ ಸುಮಾ ಗಸ್ತಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದ್ರೆ ಬಿಜೆಪಿ ಮತ್ತೊಮ್ಮೆ ಪಕ್ಷಕ್ಕಾಗಿ ಪರದೆ ಹಿಂದೆ ಕೆಲಸ ಮಾಡಿದ ಕಾರ್ಯಕರ್ತರನ್ನ ಗುರುತಿಸಿದೆ.

ದೇವಾಂಗ ಸಮಯದಾಯದವರಾದ ಡಾ.ಕೆ.ನಾರಾಯಣ್ ಮಂಗಳೂರು ಮೂಲದವರಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ನಾರಾಯಣ್ ದೇವಾಂಗ ಸಂಘದ ಖಜಾಂಚಿ ಸಹ ಆಗಿದ್ದಾರೆ. ಪ್ರಿಂಟಿಂಗ್ ಪ್ರೆಸ್ ಇಟ್ಟುಕೊಂಡಿರುವ ನಾರಾಯಣ್, ಪಕ್ಷಕ್ಕೆ ಸಂಬಂಧಿಸಿದ ಕರಪತ್ರ, ಪ್ರಚಾರ ಸಂಬಂಧ ಮುದ್ರಣಗಳನ್ನು ಮುದ್ರಿಸುತ್ತಿದ್ದರು. 58 ವರ್ಷದಿಂದ ಆರ್‍ಎಸ್‍ಎಸ್ ಕಾರ್ಯಕರ್ತರಾಗಿರುವ ನಾರಾಯಣ್, ಸದ್ಯ ನೇಕಾರ ಪ್ರಕೋಷ್ಟದ ಸಹ ಸಂಚಾಲಕರಾಗಿದ್ದಾರೆ.

Facebook Comments

comments