Connect with us

FILM

ಜಾಂಡೀಸ್ ಗೆ ಬಲಿಯಾದ ಹರಿಯಾಣದ ಯುವ ಗಾಯಕ ರಾಜು ಪಂಜಾಬಿ

ಹರಿಯಾಣ ಅಗಸ್ಟ್ 22: ಜಾಂಡೀಸ್ ನಿಂದಾಗಿ ಹರಿಯಾಣದ ಜನಪ್ರಿಯ ಗಾಯಕ ರಾಜು ಪಂಜಾಬಿ ಸಾವನಪ್ಪಿದ್ದಾರೆ. ಅವರಿಗೆ 40 ವರ್ಷ ವಯಸ್ಸಾಗಿತ್ತು.


ಜಾಂಡೀಸ್ ನಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಯ ಸಮಯದಲ್ಲಿ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದರಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ನಂತರ ಪರಿಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಗಾಯಕನ ಅಂತಿಮ ವಿಧಿವಿಧಾನಗಳನ್ನು ಅವರ ಸ್ಥಳೀಯ ಗ್ರಾಮವಾದ ರಾಜಸ್ಥಾನದ ರಾವತ್ಸರ್‌ನಲ್ಲಿ ನಡೆಸಲಾಗುತ್ತದೆ.

ರಾಜು ಪಂಜಾಬಿ ನಿಧನಕ್ಕೆ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇದು ಹರಿಯಾಣ ಸಂಗೀತ ಉದ್ಯಮಕ್ಕೆ ‘ಭರಿಸಲಾಗದ ನಷ್ಟ’ ಎಂದು ಹೇಳಿದರು. ದೇವರು ಅವರ ಪವಿತ್ರ ಪಾದದಲ್ಲಿ ಗಾಯಕನ ಆತ್ಮಕ್ಕೆ ಸ್ಥಾನ ನೀಡಲಿ ಮತ್ತು ಅವರ ಕುಟುಂಬ ಸದಸ್ಯರಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *