Connect with us

    KARNATAKA

    ಚಿಕ್ಕಮಗಳೂರು ದತ್ತಪೀಠ ವಿವಾದ: ಗೋರಿಗಳ ಸ್ಥಳಾಂತರಕ್ಕೆ ಶ್ರೀರಾಮಸೇನೆ ಬಿಗಿ ಪಟ್ಟು..!

    ದತ್ತಪೀಠ ವಿವಾದ ಮತ್ತೆ ಮುನ್ನಲೆಗೆ ಬಂದಿದ್ದು ವಿವಾದಿತ ಸ್ಥಳದಲ್ಲಿರುವ ಗೋರಿಗಳ ಸ್ಥಳಾಂತರಕ್ಕೆ ಶ್ರೀರಾಮಸೇನೆ ಬಿಗಿ ಪಟ್ಟು ಹಿಡಿದಿದೆ.
    ಚಿಕ್ಕಮಗಳೂರು : ಜಿಲ್ಲೆಯ ದತ್ತಪೀಠ ವಿವಾದ ಮತ್ತೆ ಮುನ್ನಲೆಗೆ ಬಂದಿದ್ದು ವಿವಾದಿತ ಸ್ಥಳದಲ್ಲಿರುವ ಗೋರಿಗಳ ಸ್ಥಳಾಂತರಕ್ಕೆ ಶ್ರೀರಾಮಸೇನೆ ಬಿಗಿ ಪಟ್ಟು ಹಿಡಿದಿದೆ.

    ಕಳೆದ ಬಿಜೆಪಿ ಸರ್ಕಾರದಲ್ಲಿ ದತ್ತ ಪೀಠದ ವಿವಾದಕ್ಕೆ ತೆರೆ ಎಳೆದು ವ್ಯವಸ್ಥಾಪನ ಸಮಿತಿ ನೇಮಿಸಿ ಹಿಂದೂ ಅರ್ಚಕರ ಪೂಜೆಯಲ್ಲಿ ದತ್ತ ಜಯಂತಿ ನಡೆದಿತ್ತು.

    ಈ ವರ್ಷ ದತ್ತ ಜಯಂತಿಗೆ ಎರಡು ತಿಂಗಳು ಬಾಕಿ ಇರುವಾಗ್ಲೇ ಮತ್ತೇ ವಿವಾದ ಮುನ್ನಲೆಗೆ ಬಂದಿದೆ.

    ಬಿಜೆಪಿ ಸರ್ಕಾರದ ಅವಧಿಯಲ್ಲಿ ಅದ ವ್ಯವಸ್ಥಾಪನ ಸಮಿತಿಯನ್ನ ರದ್ದು ಪಡಿಸಿ ಎಂದು ಡಿಸಿ ಮೂಲಕ ಸಿಎಂ ಹಾಗೂ ಮುಜರಾಯಿ ಸಚಿವರಿಗೆ ಸೈಯದ್​ ಬುಡೇನ್ ಶಾ ಖಾದ್ರಿ ಟ್ರಸ್ಟ್ ಮನವಿ ಮಾಡಿದೆ.

    ಇದರ ಬೆನ್ನಲ್ಲೇ ಈಗ ವಿವಾದಿತ ಸ್ಥಳದಲ್ಲಿರುವ ಗೋರಿಗಳ ಸ್ಥಳಾಂತರಕ್ಕೆ ಶ್ರೀರಾಮಸೇನೆ(Sriram Sena) ಪಟ್ಟು ಹಿಡಿದಿದ್ದು ಸ್ಥಳಾಂತರಕ್ಕೆ ಆಗ್ರಹಿಸಿ ದತ್ತಮಾಲಾ ಅಭಿಯಾನಕ್ಕೆ ಶ್ರೀರಾಮಸೇನೆ ನಿರ್ಧಾರ ಮಾಡಿದೆ.

    ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್​ ನೇತೃತ್ವದಲ್ಲಿ ಅಕ್ಟೋಬರ್​​​ 30ರಿಂದ ನವೆಂಬರ್​​​ 3ರವರೆಗೆ ದತ್ತಮಾಲಾ ಅಭಿಯಾನ ನಡೆಯಲಿದೆ.

    ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಫಿ ನಾಡು ಚಿಕ್ಕಮಗಳೂರಿನ ವಿವಾದಿತ ಇನಾಂ ದತ್ತಾತ್ರೇಯ ಬಾಬಬುಡನ್ ಸ್ವಾಮಿ ದರ್ಗಾದ ವಿವಾದಕ್ಕೆ ಕೊಂಚ ಮಟ್ಟಕ್ಕೆ ತೆರೆ ಎಳೆಯಲಾಗಿತ್ತು.

    8 ಮಂದಿಯ ಸದಸ್ಯರ ವ್ಯವಸ್ಥಾಪನ ಸಮಿತಿ ಮಾಡಲಾಗಿತ್ತು. ಆ ಸಮಿತಿಯ ನೇತೃತ್ವದಲ್ಲಿ ದತ್ತ ಜಯಂತಿಯೂ ನಡೆದಿತ್ತು.

    ಆದರೆ ಈಗ ಸೈಯದ್​ ಬುಡೇನ್ ಶಾ ಖಾದ್ರಿ ಟ್ರಸ್ಟ್,ವ್ಯವಸ್ಥಾಪನ ಸಮಿತಿಯನ್ನ ರದ್ದುಗೊಳಿಸಿ ಎಂದು ಮನವಿ ಮಾಡಿದೆ.

    8 ಮಂದಿ ಸದಸ್ಯರಲ್ಲಿ 7 ಮಂದಿ ಒಂದೇ ಸಮುದಾಯ ಹಾಗೂ ಒಬ್ಬರು ಮುಸ್ಲಿಂರನ್ನು ನೇಮಿಸಲಾಗಿದೆ.

    ಇಲ್ಲಿ ನಿಯಮ ಉಲ್ಲಂಘನೆಯಾಗಿರೋದ್ರಿಂದ ಕೂಡಲೇ ರದ್ದುಗೊಳಿಸಿ ಅರ್ಚಕರ ನೇಮಕ, ದತ್ತಪೀಠ ವ್ಯವಸ್ಥಾಪನಾ ಸಮಿತಿ ರದ್ದು ಮಾಡಿ ಹಾಗೂ ಗೋರಿಗಳ ಮೇಲೆ ಹಸಿರು ಬಟ್ಟೆ ಹೊದಿಸಿ, ಮಸೀದಿ ನಿರ್ಮಾಣಕ್ಕೂ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು.

    ಇದರ ಬೆನ್ನಲ್ಲೇ ಶ್ರೀರಾಮಸೇನೆ ಗೋರಿಗಳ ಸ್ಥಳಾಂತರಕ್ಕೆ ಪಟ್ಟು ಹಿಡಿದಿದ್ದು ಏನಾಗುತ್ತೆ ಕಾದು ನೋಡಬೇಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply