LATEST NEWS
ಸಿದ್ದರಾಮಯ್ಯ, ಡಿಕೆಶಿ- ಯು ಟಿ ಖಾದರ್ ಪರಮಾಪ್ತ ತಾಜುದ್ದೀನ್ ಶೇಖ್ ಮಗ ಎನ್ಐಎ ವಶಕ್ಕೆ……ಸ್ಪಷ್ಟನೆ ಕೊಡಿ ಎಂದ್ರು ರಘುಪತಿ ಭಟ್

ಉಡುಪಿ ಜನವರಿ 06: ಬ್ರಹ್ಮಾವರ ಬ್ಲಾಕ್ ಕಾಂಗ್ರೇಸ್ ನ ಮುಖಂಡನ ಮಗ ನನ್ನು ಎನ್ಐಎ ಬಂಧಿಸಿದ್ದು, ಇದೀಗ ಒಂದೊಂದೇ ಆತಂಕಕಾರಿ ವಿಚಾರಗಳು ತನಿಖೆಯಲ್ಲಿ ಹೊರಗೆ ಬರುತ್ತಿದೆ, ತನಿಖೆಯನ್ನು ಇನ್ನಷ್ಟು ತೀವ್ರ ಗೊಳಿಸಬೇಕು ಎಂದು ರಾಜ್ಯ ಸರ್ಕಾರ ಶಾಸಕ ರಘುಪತಿ ಭಟ್ ಆಗ್ರಹಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತಾಜುದ್ದೀನ್ ಅವರು ಬ್ಲಾಕ್ ಕಾಂಗ್ರೆಸ್ ನಲ್ಲಿ ಸಕ್ರಿಯ ಕಾರ್ಯಕರ್ತ ಬ್ರಹ್ಮಾವರ ಬ್ಲಾಕ್ ಕಾಂಗ್ರೇಸ್ ನ ಪ್ರಧಾನ ಕಾರ್ಯದರ್ಶಿ ಕೂಡ ಅಲ್ಲದೆ ಸಿದ್ದರಾಮಯ್ಯ, ಡಿಕೆಶಿ- ಯು ಟಿ ಖಾದರ್ ಪರಮಾಪ್ತ ಈ ಹಿನ್ನಲೆ ಈ ಬಗ್ಗೆ ರಾಜ್ಯ ಕಾಂಗ್ರೆಸ್ ಈ ಬಗ್ಗೆ ಸ್ಪಷ್ಟನೆ ಕೊಡಬೇಕು, ಕಾಂಗ್ರೆಸ್ ಪಕ್ಷ ಇದರ ಜವಾಬ್ದಾರಿಯನ್ನು ಹೊರಬೇಕು, ಎನ್ಐಎ ತಾಜುದ್ದೀನ್ ಅವರ ಮಗ ರಿಶಾನ್ ನ್ನು ವಶಕ್ಕೆ ಪಡೆದಿದ್ದು, ಇದೀಗ ಕಾಂಗ್ರೆಸ್ ಅವರಿಗೆ ಪ್ರಮೋಷನ್ ಕೊಟ್ಟು ಬ್ಲಾಕ್ ಅಧ್ಯಕ್ಷನನ್ನಾಗಿ ಮಾಡುತ್ತಾ? ಅಥವಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡ್ತಾತ್ತಾರಾ? ಎಂದು ಪ್ರಶ್ನಿಸಿದರು.

ಈಗಾಗಲೇ ತಾಜುದ್ದೀನ್ ಕಾಂಗ್ರೆಸ್ ನಾಯಕರ ಜೊತೆಗಿರುವ ಫೋಟೋವನ್ನು ಬಿಡುಗಡೆ ಮಾಡಿದ್ದೇನೆ, ರಿಶಾನ್ ಕುಟುಂಬದ ಬಗ್ಗೆ ಕೂಡಾ ತನಿಖೆ ಮಾಡಬೇಕು ಎಂದರು. ತಾಜುದ್ದೀನ್ ಆರ್ಥಿಕ ಪರಿಸ್ಥಿತಿ ಈ ಹಿಂದೆ ಹದಗೆಟ್ಟಿತ್ತು ಏಕಾಏಕಿ ಇತ್ತೀಚೆಗೆ ಶ್ರೀಮಂತನಾದ ಬಗ್ಗೆ ಸ್ಥಳೀಯರು ಗುಮಾನಿ ವ್ಯಕ್ತಪಡಿಸಿದ್ದಾರೆ ಎಂದರು.