Connect with us

    LATEST NEWS

    ತರಬೇತಿ ವಿಮಾನ ಪತನ – ಟ್ರೈನಿ ಪೈಲೆಟ್ ಸಾವು

    ಮಧ್ಯಪ್ರದೇಶ ಜನವರಿ 06: ತರಬೇತಿ ವಿಮಾನವೊಂದು ಪತನಗೊಂಡ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ಸಂಭವಿಸಿದೆ. ಈ ಅಪಘಾತದಲ್ಲಿ ಕ್ಯಾಪ್ಟನ್ ವಿಶಾಲ್ ಯಾದವ್ (30) ಸಾವನ್ನಪ್ಪಿದ್ದು, ಟ್ರೈನಿ ಪೈಲಟ್ ಅನ್ಶುಲ್ ಯಾದವ್ ಗಾಯಗೊಂಡಿದ್ದಾರೆ.


    ರಾಜಧಾನಿ ಭೋಪಾಲ್‌ನಿಂದ 400 ಕಿಮೀ ದೂರದಲ್ಲಿರುವ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಪತನಗೊಂಡ ನಂತರ ತರಬೇತಿ ವಿಮಾನದ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಗುರುವಾರ ರಾತ್ರಿ 11.30ರ ಸುಮಾರಿಗೆ ನಡೆದ ಈ ಘಟನೆಯಲ್ಲಿ ವಿಮಾನದಲ್ಲಿದ್ದ ಟ್ರೈನಿ ಪೈಲಟ್ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತರಬೇತಿಯಲ್ಲಿದ್ದಾಗ ದೇವಾಲಯದ ಗುಮ್ಮಟ ಮತ್ತು ಮರಕ್ಕೆ ಡಿಕ್ಕಿ ಹೊಡೆದ ನಂತರ ವಿಮಾನವು ಚೋರ್ಹಟ್ಟಾ ಏರ್‌ಸ್ಟ್ರಿಪ್‌ನಿಂದ ಮೂರು ಕಿಮೀ ದೂರದಲ್ಲಿ ಪತನಗೊಂಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply