ಮಂಗಳೂರು,ಆಗಸ್ಟ್ 31: ಕೆಂಪೇಗೌಡನ ಅರಗಿಣಿ ರಾಗಿಣಿ ಇಂದು ಕರಾವಳಿ ನಗರಿ ಮಂಗಳೂರಿಗೆ ಬಂದಿದ್ದಳು. ಮಂಗಳೂರು ನಗರದ ಮಣ್ಣಗುಡ್ಡ ನಂದಿನಿ ಫಿಶ್ ಬೌಲ್ ರೆಸ್ಟೋರೆಂಟ್ ನಲ್ಲಿ ಕರಾವಳಿಯ ತಾಜಾ ಮೀನಿನ ಖಾದ್ಯಗಳಾದ ಅಂಜಲ್ ಫ್ರೈ ಮತ್ತು ಫಿಸ್ ಕರಿ ರೈಸ್ ಸವಿದಿದ್ದಾಳೆ. ಸ್ಥಳೀಯ ಹೋಟೆಲ್ ಒಂದಕ್ಕೆ ಡೀಢೀರನೇ ಭೇಟಿ ನೀಡಿ ಮೀನಿನ ಖಾದಯಗಳನ್ನು ಸವಿದ ಪೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.
ಮಂಗಳೂರಿನ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಭಾಗವಹಿಸಲು ಬಂದಿದ್ದ ಖ್ಯಾತ ಬಹುಭಾಷಾ ನಟಿ ರಾಗಿಣಿ ದ್ವಿವೇದಿ ಕರಾವಳಿಯ ಸ್ಪೆಷಲ್ ಮೀನು ಊಟ, ಅಂಜಲ್ ಫ್ರೈ ಹಾಗೂ ಎಟ್ಟಿ ಗಿ ರೋಸ್ಟ್ ( prowns Gee Roast) ಮನಸ್ಸು ಪೂರ್ತಿ ಸವಿದಿದ್ದಾರೆ. ಇದರ ರುಚಿ ಕಂಡು ಊರಿಗೆ ವಾಪಸ್ ಹೋಗಲು ಮನಸ್ಸಾಗಲಿಲ್ಲ ವಂತೆ ರಾಗಿಣಿ ದ್ವಿವೇದಿಗೆ.

ಕನ್ನಡ ಸಿನಿಮಾವೊಂದಕ್ಕೆ ಸೈನ್ ಮಾಡಿರುವ ರಾಗಿಣಿ ತಮ್ಮ ತೂಕವನ್ನು ಗಣನೀಯ ಪ್ರಮಾಣದಲ್ಲಿ ಇಳಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ಬೇಕಾಗಿರುವ ಡಯೆಟ್ ಚಾಟ್ ಅನ್ನು ಕೂಡ ಮಾಡಿಕೊಂಡಿದ್ದು ಅದನ್ನೆಲ್ಲ ಖಡಾ ಖಂಡಿತವಾಗಿ ಪಾಲಿಸುತ್ತಾರೆ ಎಂದು ತಿಳಿದು ಬಂದಿದೆ, ಆದರೆ ಮಂಗಳೂರಿಗೆ ಬಂದ ಅವರು ಅಂಜಲ್ ಫ್ರೈ ಗೆ ಸೋತು ಹೋಗಿ ತಮ್ಮ ಎಲ್ಲ ಡಯಟ್ ಪ್ಲಾನ್ ಗಳನ್ನು ಮರೆತು ಹೊಟ್ಟೆ ತುಂಬಾ ತಿಂದು ತೇಗಿದ್ದಾರೆ…!!

ಇನ್ನು ರಾಗಿಣಿ ನಂದಿನಿ ಫಿಶ್ ಬೌಲ್ ರೆಸ್ಟೋರೆಂಟ್ ಗೆ ಬಂದಿದ್ದು ನೋಡಿ ಮಾಲೀಕ ಅನುಪ್ ಫುಲ್ ಖುಷ್. ಇನ್ನು ರೆಸ್ಟೋರೆಂಟ್ ನಲ್ಲಿ ರಾಗಿಣಿಯನ್ನು ನೋಡಿದ ಜನರು ಸೆಲ್ಫಿಗಾಗಿ ಮುಗಿಬಿದ್ದರು ಮತ್ತು ರಾಗಿಣಿ ಕೂಡ ಅವರೊಂದಿಗೆ ಒಂದೆರಡು ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಹಿಂದಿ, ಇಂಗ್ಲಿಷ್, ಪಂಜಾಬಿ, ಕನ್ನಡ, ತಮಿಳು ಮಾತನಾಡಬಲ್ಲ, ಮೂಲತಃ ಪಂಜಾಬಿನ ಬೆಂಗಳೂರು ಬೆಡಗಿ ರಾಗಿಣಿ ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ ಬಿಜಿಯಾಗಿದ್ದಾರೆ.