FILM
ಕ್ಷಮೆ ಕೇಳಿದ ನಟಿ ರಚಿತಾ ರಾಮ್
ಬೆಂಗಳೂರು ನವೆಂಬರ್ 13: ಜೋಗಿ ಪ್ರೇಮ್ ನಿರ್ದೇಶನದ ಎಕ್ ಲವ್ ಯಾ ಚಿತ್ರದ ಹಾಡೊಂದರ ಬಿಡುಗಡೆ ಸಂದರ್ಭ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರದ ಎದುರು ಶಾಂಪೇನ್ ಬಾಟಲಿ ಹಿಡಿದು ಸಂಭ್ರಮಿಸಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಜೋಗಿ ಪ್ರೇಮ್ ಹಾಗೂ ನಟಿ ರಚಿತಾ ರಾಮ್ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ.
ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಏಕ್‌ಲವ್ ಯಾ ಚಿತ್ರದ ‘ಎಣ್ಣೆಗೂ ಹೆಣ್ಣಿಗೂ….’ ಹಾಡು ಬಿಡುಗಡೆ ನಡೆದಿದೆ. ಕಾರ್ಯಕ್ರಮದ ವೇದಿಕೆಯಲ್ಲಿ ಪುನೀತ್ ಅವರ ಭಾವಚಿತ್ರ ಇಟ್ಟು ಗೌರವ ಸಲ್ಲಿಸಲಾಗಿತ್ತು.
ಬಳಿಕ ಅದೇ ವೇದಿಕೆಯಲ್ಲಿ ಚಿತ್ರದ ಹಾಡು ಬಿಡುಗಡೆಗೂ ಮುನ್ನ ಶಾಂಪೇನ್ ಬಾಟಲ್ ತೆರೆದು ನಟಿಯರಾದ ರಚಿತಾರಾಮ್, ರಕ್ಷಿತಾ, ಗಾಯಕಿ ಮಂಗ್ಲಿ, ನಿರೂಪಕ ಅಕುಲ್ ಬಾಲಾಜಿ, ರಾಣಾ, ನಿಶ್ವಿಕಾ ನಾಯ್ಡು, ಸಂಭ್ರಮಿಸಿದ್ದರು. ಈ ವರ್ತನೆ ಟೀಕೆಗೆ ಗುರಿಯಾಗಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಚಿತ್ರದ ನಾಯಕಿ ರಚಿತಾ ರಾಮ್ ಕ್ಷಮೆ ಯಾಚಿಸಿದ್ದು, ಅಪ್ಪು ಅವರನ್ನು ಅವಮಾನಿಸುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.