Connect with us

    WORLD

    50 ವರ್ಷಗಳ ಸುಧೀರ್ಘ ಹಾರಾಟದ ನಂತರ ನಿವೃತ್ತಿಯಾದ ವಿಶ್ವದ ಅತ್ಯಂತ ಹಳೆಯ ಪ್ರಯಾಣಿಕ ವಿಮಾನ

    ಸಿಡ್ನಿ: 50 ವರ್ಷಗಳ ಸುದೀರ್ಘ ಹಾರಾಟದ ನಂತರ ವಿಶ್ವದ ಅತ್ಯಂತ ಹಳೆಯ ಪ್ರಯಾಣಿಕ ವಿಮಾನ ಕ್ವಾಂಟಾಸ್‌ ನಿವೃತ್ತಿ ಹೊಂದಿದೆ.  5 ದಶಕಗಳ ಸುದೀರ್ಘ ತಡೆ ರಹಿತ ಸೇವೆ ನೀಡಿ ಪ್ರಶಂಸೆಗೆ ಪಾತ್ರವಾಗಿದ್ದ ಕ್ವಾಂಟಾಸ್ ನ ಕೊನೆಯ ಬೋಯಿಂಗ್ 747 ಪ್ಯಾಸೆಂಜರ್ ಜೆಟ್ ಬುಧವಾರ ಅಂತಿಮ ಬಾರಿಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿತು.


    ತನ್ನ ಕೊನೆಯ ಹಾರಾಟ ಸಂದರ್ಭ ಆಕಾಶದಲ್ಲಿ ವಿಮಾನಯಾನದ ಸಾಂಪ್ರದಾಯಿಕ ಲೊಗೋ ಕಾಂಗರೂ ವಿನ ಚಿತ್ತರ ಬಿಡಿಸುವ ಮೂಲಕ ಜಗತ್ತಿಗೆ ವಿಶೇಷ ಸಂದೇಶವನ್ನು ನೀಡಿತು. ಫ್ಲೈಟ್ ಕ್ಯೂಎಫ್ 7474 ವಿಮಾನವೂ ಸಿಡ್ನಿ ವಿಮಾನ ನಿಲ್ದಾಣದಿಂದ ಅಮೇರಿಕಾಕ್ಕೆ ಪ್ರಯಾಣ ಬೆಳೆಸಿ ಅಲ್ಲಿ ನಿವೃತ್ತಿ ಘೋಷಿಸಿತು.


    ಆಸ್ಟ್ರೇಲಿಯಾದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಕ್ವಾಂಟಾಸ್ ನ ಸುಪರ್ದಿಯಲ್ಲಿದ್ದ ಈ ಜೆಟ್‌ ವಿಮಾನ 1969 ರಲ್ಲಿ ನಿರ್ಮಾಣಗೊಂಡು 1971 ರ ಆಗಸ್ಟ್‌ ನಿಂದ ಪ್ರಯಾಣಿಕರ ಸೇವೆ ಆರಂಭಿಸಿತ್ತು. ಈ ವರ್ಷದ ಅರಂಭದಲ್ಲೇ ಸೇವೆಯಿಂದ ನಿವೃತ್ತಿಯಾಗಬೇಕಿತ್ತು, ಅದರೆ ಕೊರೊನಾ ಮಹಾಮಾರಿ ಜಾಗತಿಕವಾಗಿ ಹರಡಿದ್ದರಿಂದ 6 ತಿಂಗಳು ನಿವೃತ್ತಿಯನ್ನು ಮುಂದೂಡಿತ್ತು.


    ಕೋವಿಡ್ -19ರ ಲಾಕ್‌ಡೌನ್ ಸಮಯದಲ್ಲೂ ತನ್ನ ಸೇವೆಯನ್ನು ನೀಡಿ ಸೈ ಎಣಿಸಿತ್ತು ಈ ಜೆಟ್‌ ವಿಮಾನ.ಕೊರೊನಅದಿಂದ ಸಂಕಷ್ಟದಲ್ಲಿದ್ದ ಅನೇಕ ದೇಶಗಳಲ್ಲಿದ್ದ ಪ್ರಜೆಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
    ಸಿಡ್ನಿಯಿಂದ ಅಮೇರಿಕಾದ ಲಾಸ್‌ ಏಂಜಲೀಸ್‌ ಗೆ ಕೊನೆಯ ಪ್ರಯಾಣ ಆರಂಭಿಸಿದ್ದ ತಮ್ಮ ನೆಚ್ಚಿನ ವಿಮಾನಕ್ಕೆ ವಿದಾಯ ಕೋರಾಲು ಸಾವಿರಾರು ಜನ ಸಿಡ್ನಿ ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು, ನೀರಿನ ಸಿಂಚನದೊಂದಿಗೆ ಅಂತಿಮ ವಿದಾಯ ಹೇಳಿದರು.


    ಕಳೆದ 50 ವರ್ಷಗಳಲ್ಲಿ ಕ್ವಾಂಟಾಸ್‌ ಹಲವಾರು ಕಾರ್ಯಾಚರಣೆಗಳನ್ನು ನಡೆಸಿದೆ. ಕಳೆದ 50 ವರ್ಷಗಳಲ್ಲಿ ಕ್ವಾಂಟಾಸ್‌ 250 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊತ್ತೊಯ್ದಿದೆ. 1974 ರಲ್ಲಿ ಟ್ರೇಸಿ ಚಂಡಮಾರುತದ ಸಮಯದಲ್ಲಿ ಡಾರ್ವಿನ್‌ನಿಂದ 674 ಪ್ರಯಾಣಿಕರನ್ನು ಕರೆತಂದಿತು ಮತ್ತು 2004 ರ ಡಿಸೆಂಬರ್‌ನಲ್ಲಿ ಭಾರಿ ಸುನಾಮಿಯ ನಂತರ ಮಾಲ್ಡೀವ್ಸ್ ಮತ್ತು ಶ್ರೀಲಂಕಾದಿಂದ ವೈದ್ಯಕೀಯ ಸಾಮಗ್ರಿಗಳನ್ನು ಮತ್ತು ಪ್ರವಾಸಿಗರನ್ನು ಕರೆತಂದಿತ್ತು. ಇತ್ತೀಚೆಗೆ ಚೀನಾದಲ್ಲಿ ವುಹಾನ್‌ನಿಂದ ಸಿಕ್ಕಿಬಿದ್ದ ನೂರಾರು ಆಸ್ಟ್ರೇಲಿಯನ್ನರನ್ನು ಮನೆಗೆ ಕರೆತರಲು ಇದನ್ನು ಬಳಸಲಾಗಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply