Connect with us

    LATEST NEWS

    ಸುಮ್ಮನೆ ಕುಳಿತು 20 ಲಕ್ಷಕ್ಕೂ ಹೆಚ್ಚು ವೀವ್ಸ್​ ಪಡೆದ ಯೂಟ್ಯೂಬರ್..!!

    ಜಕಾರ್ತ: ಯೂಟ್ಯೂಬ್ ನಲ್ಲಿ ಲಕ್ಷಾಂತರ ವೀಕ್ಷಣೆ ಪಡೆಯಲು ಕಸರತ್ತು ಮಾಡುವ ಈ ಕಾಲದಲ್ಲಿ ಇಲ್ಲೊಬ್ಬ ಯೂಟ್ಯೂಬರ್​ ಏನೂ ಮಾಡದೆ ಲಕ್ಷಾಂತರ ವೀವ್ಸ್​ ಗಿಟ್ಟಿಸಿ ಅಚ್ಚರಿ ಮೂಡಿಸಿದ್ದಾನೆ. ಇತನ ಒಂದು ವಿಡಿಯೋವನ್ನು ಬರೋಬ್ಬರಿ 20 ಲಕ್ಷ ವೀಕ್ಷಿಸಿದ್ದಾರೆ.


    ಇಂಡೋನೆಷ್ಯಾದ ಮುಹಮ್ಮದ್​ ದಿದಿತ್​ ಎಂಬ ಯೂಟ್ಯೂಬರ್​ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದಾರೆ. ತಮ್ಮ ಮಾತೃ ಭಾಷೆಯಲ್ಲಿ ವಿಡಿಯೋ ಕುರಿತು ಬರೆದುಕೊಂಡಿದ್ದು ಅದರ ಸಾರ ಹೀಗಿದೆ… “ಏನೂ ಮಾಡದ ಎರಡು ಗಂಟೆ” ಎಂದು ಅಡಿಬರಹ ನೀಡಲಾಗಿದೆ.

    ಈ ವಿಡಿಯೋದಲ್ಲಿರುವ ಯೂಟ್ಯೂಬರ್​ 2 ಗಂಟೆ 20 ನಿಮಿಷ ಹಾಗೂ 52 ಸೆಕೆಂಡ್​ ಏನೂ ಮಾಡದೇ ಸುಮ್ಮನೆ ನೆಲದ ಮೇಲೆ ಕುಳಿತು ಮಂಚಕ್ಕೆ ಒರಗಿದ್ದಾರೆ. ಕೇವಲ ಕ್ಯಾಮೆರಾವನ್ನು ಮಾತ್ರ ದಿಟ್ಟಿಸಿ ನೋಡಿದ್ದಾನೆ. ಈ ವಿಡಿಯೋದಲ್ಲಿ ಯೂಟ್ಯೂಬರ್​ ಕೇವಲ ಕಣ್ಣು ಮಿಟುಕಿಸುವುದನ್ನು ಬಿಟ್ಟರೆ, ಬೇರೆ ಯಾವ ಚಟುವಟಿಕೆಯಾಗಲಿ, ಶಬ್ಧವಾಗಲಿ ವಿಡಿಯೋದಲ್ಲಿ ಇಲ್ಲ. ಆದರೂ ಈ ವಿಡಿಯೋವನ್ನು ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಮಂದಿ ವಿಕ್ಷಿಸಿದ್ದಾರೆ.


    ಈ ಬಗ್ಗೆ ಡಿಸ್ಕ್ರಿಪ್ಸನ್​ ಬಾಕ್ಸ್​ನಲ್ಲಿ ಬರೆದುಕೊಂಡಿರುವ ಯೂಟ್ಯೂಬರ್, ನಾನು ಈ ವಿಡಿಯೋ ಏಕೆ ಮಾಡಿದೆ ಎಂಬುದನ್ನು ನಾನು ಶೇರ್​ ಮಾಡಿಕೊಳ್ಳುತ್ತೇನೆ. ಯುವಜನರಿಗೆ ಶಿಕ್ಷಣ ನೀಡುವ ವಿಷಯವನ್ನು ಪೋಸ್ಟ್ ಮಾಡಲು ಇಂಡೋನೇಷಿಯನ್​ ಸೊಸೈಟಿ ಕೇಳಿಕೊಂಡಿತು. ಇಷ್ಟವಿಲ್ಲದೆ, ಭಾರವಾದ ಹೃದಯದಿಂದ ನಾನಿದನ್ನು ಮಾಡಿದೆ. ನಾವೀಗ ವಿಡಿಯೋದ ಲಾಭದ ಬಗ್ಗೆ ಮಾತನಾಡಬೇಕಾದರೆ, ಅದೆಲ್ಲಾ ವೀಕ್ಷಕರ ಮೇಲೆ ಅವಲಂಬಿತವಾಗಿರುತ್ತದೆ. ಏನೇ ಆಗಲಿ ಈ ವಿಡಿಯೋದಿಂದ ನೀವೆಲ್ಲರೂ ಮನರಂಜನೆ ಹಾಗೂ ಲಾಭವನ್ನು ಪಡೆಯುತ್ತೀರಾ ಎಂದು ನಾನು ಭಾವಿಸಿದ್ದೇನೆಂದು ಬರೆದುಕೊಂಡಿದ್ದಾರೆ.

    ಜುಲೈ 10ರಂದು ಅಪ್​ಲೋಡ್​ ಆದ ವಿಡಿಯೋ ಇದೀಗ ವೈರಲ್​ ಆಗಿದ್ದು, ಯೂಟ್ಯೂಬ್​ನಲ್ಲಿ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ವ್ಯಕ್ತಿ ಏನು ಮಾಡದೇ ಎರಡು ಗಂಟೆ ಕಳೆದಿದ್ದಾರೆ ಎಂದು ಕಾಮೆಂಟ್​ ಮಾಡಿದರೆ, ಮತ್ತೊರ್ವ ಇವರು 362 ಬಾರಿ ಕಣ್ಣು ಮಿಟುಕಿಸಿದ್ದಾರೆ ಎಂದಿದ್ದಾರೆ. ಏನೇ ಆದರೂ ಅಷ್ಟೋಂದು ವೀವ್ಸ್​ ಬಂದಿರುವುದು ಅಚ್ಚರಿಯೇ ಸರಿ.

    Share Information
    Advertisement
    Click to comment

    You must be logged in to post a comment Login

    Leave a Reply