DAKSHINA KANNADA
45 ಕೆಜಿ ತೂಕದ ಆಡನ್ನು ನುಂಗಲು ಹೋದ ಹೆಬ್ಬಾವು…!!
ಕಡಬ ಜೂನ್ 28: ಭಾರೀ ಗಾತ್ರದ ಹೆಬ್ಬಾವೊಂದು 45 ಕೆಜಿ ತೂಕದ ಆಡನ್ನು ನುಂಗಲು ವಿಫಲ ಯತ್ನ ನಡೆಸಿದ್ದು, ಈ ಘಟನೆಯಲ್ಲಿ ಆಡು ಸಾವನಪ್ಪಿದೆ. ಈ ಘಟನೆ ನಡೆದಿದ್ದು ಕಡಬ ತಾಲೂಕಿನ ಐತ್ತೂರು ಗ್ರಾಮದ ಬ್ರಾಂತಿಕಟ್ಟೆ ಕೊಡೆಂಕಿರಿ ಎಂಬಲ್ಲಿ.
ಸ್ಥಳೀಯರಾದ ಜಾರ್ಜ್ ಕುಟ್ಟಿ ಎಂಬವರಿಗೆ ಸೇರಿದ ಸುಮಾರು 45 ಕೆಜಿ ತೂಕದ ಗಂಡು ಆಡು ಹೆಬ್ಬಾವಿನ ಉರುಳಿಗೆ ಸಿಕ್ಕಿ ಉಸಿರುಗಟ್ಟಿ ಪ್ರಾಣ ಬಿಟ್ಟಿದೆ. ಆಡಿನ ತಲೆಯ ಭಾಗವನ್ನು ನುಂಗಿದರೂ ಉಳಿದ ಭಾಗವನ್ನು ನುಂಗಲು ಸಾಧ್ಯವಾಗದೆ ಸೋತು ಸತ್ತ ಆಡನ್ನು ಸ್ಥಳದಲ್ಲೇ ಬಿಟ್ಟು ಪೊದೆಯೊಳಗೆ ಸೇರಿಕೊಂಡಿದೆ.
You must be logged in to post a comment Login