Connect with us

    DAKSHINA KANNADA

    ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ

    ಸುಳ್ಯ ಜೂನ್ 28: ಯುವಕನೋರ್ವ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ‌ ಉಬರಡ್ಕದಲ್ಲಿ ನಿನ್ನೆ ರಾತ್ರಿ ವರದಿಯಾಗಿದೆ.


    ಮೃತ ಯುವಕನನ್ನು ಅರಂತೋಡು ಗ್ರಾಮದ ರವಿ ಎಂದು ಗುರುತಿಸಲಾಗಿದೆ. ಈತ ಉಬರಡ್ಕ ಗ್ರಾಮದ ಬೆಳ್ರಂಪಾಡಿ‌ ಎಂಬಲ್ಲಿನ ಗುಡ್ಡದಲ್ಲಿ ಕೋವಿಯಿಂದ ಗುಂಡು‌ ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೇಳಲಾಗಿದೆ.

    ಬೆಳ್ರಂಪಾಡಿಯ ಮನೆಯೊಂದರಲ್ಲಿ ರವಿ ಕೆಲಸಮಯದಿಂದ ಕೆಲಸಕ್ಕಿದ್ದರೆನ್ನಲಾಗಿದ್ದು, ಕಳೆದ ರಾತ್ರಿ ಕೋವಿ ಹಿಡಿದು ಗುಡ್ಡಕ್ಕೆ ಹೋಗಿದ್ದ ರವಿ ಅಲ್ಲಿ‌ ತಲೆಗೆ ಗುಂಡು ಹೊಡೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಸ್ಥಳಕ್ಕೆ‌ ರಾತ್ರಿಯೇ ಪೋಲೀಸರು ‌ಬಂದು‌ ಮಹಜರು ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೇಲುನೋಟಕ್ಕೆ ಆತ್ಮಹತ್ಯೆ ಪ್ರಕರಣ ‌ಎಂದು ಶಂಕಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply