DAKSHINA KANNADA
4 ಗಂಟೆ 20 ನಿಮಿಷಗಳಲ್ಲಿ ಬೆಂಗಳೂರು ತಲುಪಿದ ಅಂಬ್ಯುಲೆನ್ಸ್
ಪುತ್ತೂರು ಡಿಸೆಂಬರ್ 2 : ಪುತ್ತೂರಿನಿಂದ ಬೆಂಗಳೂರಿನ ಅಂದಾಜು 7 ಗಂಟೆಗಳ ದಾರಿಯನ್ನು ಕೆಎಂಸಿಸಿ ಅಂಬ್ಯುಲೆನ್ಸ್ ಚಾಲಕ ಕೇವಲ 4 ಗಂಟೆ 20 ನಿಮಿಷಗಳಲ್ಲಿ ತಲುಪುವ ಮೂಲಕ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರೋಗಿಯನ್ನು ಬೆಂಗಳೂರು ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅರೇಹಳ್ಳಿ ಮೂಲದ 22 ವರ್ಷದ ಸುಹಾನ ಶ್ವಾಸಕೋಶ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಳು. ಲಂಗ್ಸ್ ಟ್ರಾನ್ಸ್ ಪ್ಲಾಂಟ್ ತುರ್ತು ಶಸ್ತ್ರ ಚಿಕಿತ್ಸೆಯ ತುರ್ತು ಅಗತ್ಯವಿದ್ದ ಹಿನ್ನಲೆ ಝೀರೋ ಟ್ರಾಫಿಕ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಬೆಳಗ್ಗೆ 11 ಗಂಟೆಗೆ ಪುತ್ತೂರು ಮಹಾವೀರ ಆಸ್ಪತ್ರೆಯಿಂದ ಝೀರೋ ಟ್ರಾಫಿಕ್ ಮೂಲಕ ಆಂಬುಲೆನ್ಸ್ ಪ್ರಯಾಣ ಆರಂಭಿಸಿತು. ವಿವಿಧ ಠಾಣಾ ಪೊಲೀಸರು, ಸಂಘ ಸಂಸ್ಥೆಗಳ ಕಾರ್ಯಕರ್ತರು ಸುಗಮ ಸಂಚಾರಕ್ಕೆ ಸಹಕರಿಸಿದರು ವಿಟ್ಲದ “ಡಿ ಗ್ರೂಪ್”ಆಂಬ್ಯುಲೆನ್ಸ್ ಬೆಂಗಾವಲಾಗಿ ಮುಂಭಾಗದಿಂದ ತೆರಳಿ ಸಹಕರಿಸಿತು. ಸುಮಾರು 390 ಕಿ.ಮೀ. ದೂರದ ಮಾರ್ಗದುದ್ದಕ್ಕೂ ಪೊಲೀಸ್ ಇಲಾಖೆ ಕೂಡ ಝೀರೋ ಟ್ರಾಫಿಕ್‍ಗೆ ಎಲ್ಲಾ ವ್ಯವಸ್ಥೆ ಮಾಡಿದೆ.
ಆಂಬುಲೆನ್ಸ್ ಬೆಂಗಳೂರು ವೈದೇಹಿ ಆಸ್ಪತ್ರೆ ತಲುಪಿದ ತಕ್ಷಣವೇ ಸುಹಾನಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆಯ ಪ್ರಕ್ರಿಯೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪುತ್ತೂರಿನಿಂದ ಬೆಂಗಳೂರಿಗೆ ಸುಮಾರು 7-8 ಗಂಟೆ ಸಮಯದ ಮಾರ್ಗವನ್ನ ಕೇವಲ 4 ಗಂಟೆ 20 ನಿಮಿಷಕ್ಕೆ ತಲುಪಲಾಗಿದೆ.