Connect with us

DAKSHINA KANNADA

ಪುತ್ತೂರಿನ ಬೊಳುವಾರು ಆಂಜನೇಯ ಮಂತ್ರಾಲಯದ ಧರ್ಮದರ್ಶಿ ಪಿ ನಾರಾಯಣ ಮಣಿಯಾಣಿ ನಿಧನ

ಪುತ್ತೂರು: ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಧರ್ಮದರ್ಶಿ ಬೊಳುವಾರು ನಿವಾಸಿ ಪಿ ನಾರಾಯಣ ಮಣಿಯಾಣಿ ಇಂದು ನಸುಕಿನ ಜಾವ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.


ಸಂಘ ಪರಿವಾರದಲ್ಲಿ ಸಕ್ರಿಯರಾಗಿದ್ದ ನಾರಾಯಣ ಮಣಿಯಾಣಿ ಅವರು ಬಿಜೆಪಿಯ ಹಿರಿಯ ಕಾರ್ಯಕರ್ತರಾಗಿದ್ದರು. ಪುತ್ತೂರು ಮುಖ್ಯರಸ್ತೆಯಲ್ಲಿ ವಾಣಿ ಪ್ರಿಂಟರಿ ಸಂಸ್ಥೆಯನ್ನು ಹೊಂದಿದ್ದ ಅವರು ತನ್ನ ನಿವೃತ್ತಿಯಲ್ಲಿ ಅವರ ಪುತ್ರ ನೀಲಂತ್ ಅವರು ಸಂಸ್ಥೆಯನ್ನು ಮಂದುವರಿಸಿದರು. ಮೃತರು ಪತ್ನಿ ಭಾಗೀರಥಿ, ಪುತ್ರರಾದ ಪುತ್ತೂರು ಪತ್ರಕರ್ತರ ಸಂಘದ ಸದಸ್ಯ ಹಾಗು ಮೆನೇಜರ್ ಪ್ರವೀಣ್ ಕುಮಾರ್, ನೀಲಂತ್ ಬೊಳುವಾರು, ಪುತ್ರಿ ಬೆಂಗಳೂರಿನಲ್ಲಿರುವ ಡಾ. ವಾಣಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.