Connect with us

LATEST NEWS

ವಿವಿಐಪಿ ರೋಡ್ ಕ್ರಾಸಿಂಗ್ ಗಾಗಿ ಟ್ರಾಫಿಕ್ ನಿಲ್ಲಿಸಿದ ಪೊಲೀಸರು…!!

ಉಡುಪಿ ಫೆಬ್ರವರಿ 11: ಉಡುಪಿ ನಗರದಲ್ಲಿ ಇಂದು ಏಕಾಏಕಿ ಟ್ರಾಫಿಕ್ ಜಾಮ್ ಸಂಭವಿಸಿದೆ. ಜಂಕ್ಷನ್ನಲ್ಲಿ ಮೂರು ಜನ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು ಇದ್ದರೂ ಕೂಡ ಟ್ರಾಫಿಕ್ ಕ್ಲಿಯರ್ ಮಾಡಲು ಆಗಲಿಲ್ಲ. ಒಬ್ಬರು ವಿವಿಐಪಿ ರೋಡ್ ಕ್ರಾಸಿಂಗ್ ಮಾಡಲು ಈ ರೀತಿ ಟ್ರಾಫಿಕ್ ನ್ನು ಪೊಲೀಸರು ನಿಲ್ಲಿಸಬೇಕಾಗಿತ್ತು. ಆ ವಿವಿಐಪಿ ಯಾರು ಗೊತ್ತಾ…!!


ಕಲ್ಸಂಕ ಜಂಕ್ಷನ್ ಬಳಿ ನಾಗರಹಾವೊಂದು ಬಂದಿತ್ತು. ಅಂಬಾಗಿಲು ರಸ್ತೆ ಕಡೆಯಿಂದ ಕೃಷ್ಣಮಠದ ಪಾರ್ಕಿಂಗ್ ಏರಿಯಾಗೆ ಹೋಗುವ ಕಡೆ ನಾಗರಹಾವು ನಿಧಾನಕ್ಕೆ ಚಲಿಸುತ್ತಿತ್ತು. ಸಿಮೆಂಟ್ ರಸ್ತೆಯಾದ್ದರಿಂದ ವೇಗವಾಗಿ ರಸ್ತೆದಾಟಲು ನಾಗರಹಾವಿಗೆ ಸಾಧ್ಯವಾಗಿಲ್ಲ.
ಹೀಗಾಗಿ ಸ್ಥಳೀಯರು, ವಾಹನ ಸವಾರರು , ಪೊಲೀಸರು ರಸ್ತೆದಾಟಲು ಅವಕಾಶ ಮಾಡಿಕೊಟ್ಟರು‌. ಯಾವುದೇ ವಾಹನಗಳು ಅಡ್ಡ ಚಲಿಸದಂತೆ ನಾಗರಹಾವಿಗೆ ತಬ್ಬಿಬ್ಬಾಗದಂತೆ ನೋಡಿಕೊಂಡರು. ಕೆಲವು ಎಡಬಿಡಂಗಿ ದ್ವಿಚಕ್ರವಾಹನ ಸವಾರರು ಹಾವು ದಾಟುವ ಮೊದಲೇ ರಸ್ತೆದಾಟಲು ಪ್ರಯತ್ನಿಸಿದರೂ ಪೊಲೀಸರು ಅಡ್ಡಗಟ್ಟಿ ನಾಗರಹಾವನ್ನು ಸುರಕ್ಷಿತವಾಗಿ ರಸ್ತೆ ದಾಟಿಸಿದರು.