LATEST NEWS
ಟಿವಿಎಸ್ ಗೆ ಡಿಕ್ಕಿ ಹೊಡೆದ ಟೆಂಪೋ.. ಟಿವಿಎಸ್ ಸವಾರ ಗಂಭೀರ
ಉಡುಪಿ ಫೆಬ್ರವರಿ 12: ಟೆಂಪೋ ಟ್ರಾವೆಲರ್ ಚಾಲಕನ ನಿಯಂತ್ರಣ ತಪ್ಪಿ ಟಿವಿಎಸ್ ಗೆ ಡಿಕ್ಕಿ ಹೊಡೆದ ಘಟನೆ ಉಡುಪಿ ಕಾಪು ಸಮೀಪ ನಡೆದಿದ್ದು, ಈ ಘಟನೆಯಲ್ಲಿ ಟಿವಿಎಸ್ ಸವಾರನಿಗೆ ಗಂಭೀರ ಗಾಯಗಳಾಗಿದೆ.
ಉಡುಪಿ ಕಾಪು ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ವಿದ್ಯಾನಿಕೇತನ ಶಾಲೆಯ ಬಳಿ ಇಂದು ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಟಿವಿಎಸ್ ಚಾಲಕನಿಗೆ ಗಾಯಗಳಾಗಿವೆ. ಕೇರಳ ಕಡೆಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಟಿವಿಎಸ್ ಗೆ ಕೇರಳದಿಂದ ಕೊಲ್ಲೂರು ಕಡೆ ಸಾಗುತ್ತಿದ್ದ ಟೂರಿಸ್ಟ್ ಟೆಂಪೋ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ಕಂದಕಕ್ಕೆ ವಾಲಿ ನಿಂತಿದೆ. ಘಟನಾ ಸ್ಥಳಕ್ಕೆ ಕಾಪು ಸಂಚಾರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.