DAKSHINA KANNADA
ಪುತ್ತೂರು ಕೆಎಸ್ ಆರ್ ಟಿಸಿ ಬಸ್ ನೌಕರರ ದಿಢೀರ್ ಮುಷ್ಕರ

ಪುತ್ತೂರು ಡಿಸೆಂಬರ್ 12: ಕೆಎಸ್ ಆರ್ ಟಿಸಿ ನೌಕರರನ್ನು ರಾಜ್ಯ ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂಬ ಬೇಡಿಕೆ ಇಟ್ಟು ಕೆಎಸ್ ಆರ್ ಟಿಸಿ ನೌಕರರು ನಡೆಸುತ್ತಿರುವ ಪ್ರತಿಭಟನೆಗೆ ಪುತ್ತೂರಿನಲ್ಲಿ ಬೆಂಬಲ ವ್ಯಕ್ತವಾಗಿದ್ದು, ನಿನ್ನೆ ಸಹಜ ಸ್ಥಿತಿಯಲ್ಲಿದ್ದ ಬಸ್ ಸಂಚಾರ ಇಂದು ಮುಷ್ಕರ ಪರಿಣಾಮ ಸ್ಥಗಿತಗೊಂಡಿದೆ.
ರಾಜ್ಯದಾದ್ಯಂತ ನಿನ್ನೆಯಿಂದ ಪ್ರಾರಂಭವಾದ ಕೆಎಸ್ ಆರ್ ಟಿಸಿ ಬಸ್ ನೌಕರರ ಪ್ರತಿಭಟನೆಗೆ ನಿನ್ನೆ ದಕ್ಷಿಣಕನ್ನಡ ಡಿಲ್ಲೆಯಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಆದರೆ ಇಂದು ಪುತ್ತೂರು ಡಿಪೋದಿಂದ ಕೆಎಸ್ ಆರ್ ಟಿಸಿ ಬಸ್ ರಸ್ತೆಗೆ ಇಳಿಯದೇ ದಿಢೀರ್ ಮುಷ್ಕರ ಆರಂಭವಾಗಿದೆ. ಈ ಮೂಲಕ ರಾಜ್ಯದಾದ್ಯಂತ ನಡೆಯುತ್ತಿರುವ ನೌಕರರ ಮುಷ್ಕರಕ್ಕೆ ಪುತ್ತೂರು ಉಪವಿಭಾಗದಿಂದ ಬೆಂಬಲ ವ್ಯಕ್ತವಾಗಿದೆ.

ಈ ನಡುವೆ ಸಾರಿಗೆ ಸಿಬ್ಬಂದಿಗಳ ಏಕಾಏಕಿ ಮುಷ್ಕರದಿಂದಾಗಿ ಬಸ್ ನಿಲ್ದಾಣದಲ್ಲಿ ಬಸ್ ಇಲ್ಲದೆ ಪ್ರಯಾಣಿಕರು ಪರದಾಡಬೇಕಾದ ಪರಿಸ್ಥಿತಿ ಬಂದೊದಗಿದೆ.