FILM
ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗಿ ಎಲ್ಲವನ್ನೂ ಕಳೆದುಕೊಂಡೆ – ರಾಖಿ ಸಾವಂತ್
ಮುಂಬೈ : ಬಿಗ್ ಬಾಸ್ ಮೊದಲ ಸೀಸನ್ ನಲ್ಲಿ ಮನೆಯ ಸ್ಪರ್ಧಿಯಾಗಿದ್ದ ರಾಖಿ ಸಾವಂತ್ ಈಗ ಮತ್ತೆ ಹಿಂದಿ ಬಿಗ್ ಬಾಸ್ 14ನೇ ಸೀಸನ್ ನಲ್ಲಿ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಬಿಗ್‌ಬಾಸ್ 14ನೇ ಸೀಸನ್‌ಗೆ ‘ಚಾಲೆಂಜರ್’ ಆಗಿ ತೆರಳುವ ಮುನ್ನ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ರಾಖಿ ಶ್ರೀಮಂತ ವ್ಯಕ್ತಿಯನ್ನು ಮದುವೆಯಾದರೆ ನನ್ನ ಕಷ್ಟಗಳು ಪರಿಹಾರ ಆಗುತ್ತವೆ ಎಂಬ ಕಾರಣಕ್ಕೆ ಶ್ರೀಮಂತ ವ್ಯಕ್ತಿಯನ್ನು ಮದುವೆಯಾದೆ, ಆದರೆ ನಾನು ಅಂದುಕೊಂಡಂತೆ ಆಗಲಿಲ್ಲ. ಮದುವೆಯಾಗಿ ನಾನು ತಪ್ಪು ಮಾಡಿದೆ. ಆ ವ್ಯಕ್ತಿಯನ್ನು ನಾನು ಮದುವೆ ಆಗಬಾರದಿತ್ತು ಎಂದಿದ್ದಾರೆ.
ನಾನು ಮದುವೆಯಾಗಿ ತಪ್ಪು ಮಾಡಿದೆ, ಈಗ ಅನುಭವಿಸುತ್ತಿದ್ದೇನೆ. ನನ್ನ ಕುಟುಂಬದ ಜವಾಬ್ದಾರಿಯನ್ನು ನಾನೇ ಹೊರುತ್ತಿದ್ದೇನೆ. ನನ್ನ ಬಳಿ ಇರುವ ಹಣವೆಲ್ಲಾ ಖಾಲಿ ಆಗಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇನೆ. ಮದುವೆ ನನ್ನ ಜೀವನದ ಅತಿದೊಡ್ಡ ತಪ್ಪು.
ಜೊತೆಗೆ ನಾನು ಶಿಕ್ಷಣ ಪಡೆಯದಿರುವುದು ಸಹ ನನ್ನ ಪ್ರತಿಭೆ ಮೇಲೆ ನನಗೆ ನಂಬಿಕೆ ಇತ್ತು, ಈಗಲೂ ಇದೆ. ನನ್ನ ಪ್ರತಿಭೆಯನ್ನೇ ನಂಬಿಕೊಂಡು ನಾನು ಜೀವನ ಸಾಗಿಸುತ್ತಿದ್ದೇನೆ. ನಾನು ಸೂಕ್ತ ಶಿಕ್ಷಣ ಪಡೆಯದೇ ಇರುವುದೇ ನನ್ನ ವೃತ್ತಿ ಜೀವನದಲ್ಲಿ ನನ್ನ ಹಿನ್ನಡೆಗೆ ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಸೂಕ್ತ ಶಿಕ್ಷಣ ಪಡೆಯದೇ ಇರುವುದೇ ನನ್ನ ವೃತ್ತಿ ಜೀವನದಲ್ಲಿ ನನ್ನ ಹಿನ್ನಡೆಗೆ ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಗಂಡನ ಬಗ್ಗೆ ನಾನು ಎಲ್ಲಿಯೂ ಹೇಳಿಕೊಂಡಿಲ್ಲ. ಆತನಿಗೆ ಸಮಾಜದ ಎದುರು ಬರಲು ಇಷ್ಟವಿಲ್ಲ. ಆತ ಬ್ರಿಟನ್‌ನಲ್ಲಿದ್ದಾನೆ. ಭಾರತಕ್ಕೆ ಬಂದು ಒಂದು ವರ್ಷವಾಯಿತು. ನಾನೂ ಆತನನ್ನು ನೋಡಿ ಒಂದು ವರ್ಷವಾಯಿತು ಎಂದು ಹೇಳಿದ್ದಾರೆ.
Facebook Comments
You may like
-
ಶಿವಮೊಗ್ಗದಲ್ಲಿ ಬಾಲಿವುಡ್ ಬೆಡಗಿ ಜಾಕಲೀನ್ ಫೆರ್ನಾಂಡಿಸ್
-
ಲಾಕ್ಡೌನ್ ನಂತರ ಮೊದಲ ಬಾರಿಗೆ ‘ಹೌಸ್ಫುಲ್’ ಆದ ಮಂಗಳೂರಿನ ಥಿಯೇಟರ್, ಮಲ್ಟಿಪ್ಲೆಕ್ಸ್ಗಳು
-
ಬೆಲ್ಲಿ ಡ್ಯಾನ್ಸ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾಹ್ನವಿ ಕಪೂರ್…!!
-
ಬಾಹುಬಲಿ ದಾಖಲೆ ಮುರಿದ ಕೆಜಿಎಫ್ ಚಾಪ್ಟರ್ 2
-
ಬಾವಿಗೆ ಬಿದ್ದ ಬಹುಭಾಷಾ ನಟಿ ನಮಿತಾ….!!
-
ಬಿಡುಗಡೆ ಮೊದಲೇ ಕೆಜಿಫ್-2 ಚಿತ್ರದ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಲೀಕ್!
You must be logged in to post a comment Login