DAKSHINA KANNADA
ಐಪಿಎಲ್ ಗೆದ್ದ ಖುಷಿಯ ಬೆನ್ನಲ್ಲೇ ದು:ಖ ತಂದ ದುರಂತ – ಸತೀಶ್ ಕುಂಪಲ.

ಮಂಗಳೂರು ಜೂನ್ 04: 18 ವರುಷಗಳ ಬಳಿಕ ಐ.ಪಿ.ಎಲ್. ನಲ್ಲಿ ಕರ್ನಾಟಕದ ಆರ್.ಸಿ.ಬಿ. ತಂಡ ಅಮೋಘ ವಾಗಿ ಆಡಿ ಟ್ರೋಫಿ ಯನ್ನು ನಮ್ಮದಾಗಿಸಿ ರಾಜ್ಯದ ಆರು ಕೋಟಿ ಕನ್ನಡಿಗರ ಮನೆ ಮನೆಗಳಲ್ಲಿ ಸಂಭ್ರಮ ತಂದಿತ್ತು. ಆದರೆ ತರಾತುರಿಯಲ್ಲಿ, ಸೂಕ್ತ ಬಂದೋಬಸ್ತು, ವ್ಯಾಪಕ ಸಿದ್ಧತೆ ಯಿಲ್ಲದೆ ನಡೆಸಿದ ಸಂಭ್ರಮಾಚರಣೆ ಯಿಂದ ಅಭಿಮಾನಿಗಳು ಪ್ರಾಣ ಕಳೆದಿರುವುದು ಅತ್ಯಂತ ದುರಂತ ಮತ್ತು ದು:ಖದ ಘಟನೆಯಾಗಿದೆ ಎಂದು ಭಾರತೀಯ ಜನತಾ ಪಾರ್ಟಿ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಖೇದ ವ್ಯಕ್ತ ಪಡಿಸಿದರು.
ದುರಂತದಲ್ಲಿ ಬಲಿಯಾದವರಿಗೆ ರಾಜ್ಯ ಸರ್ಕಾರ ಮತ್ತು ಬಿ.ಸಿ.ಸಿ.ಐ. ಪರಿಹಾರ ನೀಡಬೇಕು ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಅವರು ಒತ್ತಾಯಿಸಿದರು
