ಸರಳ ರೀತಿಯಲ್ಲಿ ನಡೆದ ಪುತ್ತೂರು ಜಾತ್ರೆಯ ಗೊನೆ ಕಡಿಯುವ ಮುಹೂರ್ತ

ಪುತ್ತೂರು ಎಪ್ರಿಲ್ 1: ವಿಜೃಂಭಣೆಯಿಂದ ನಡೆಯಬೇಕಾಗಿದ್ದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಗೊನೆ ಪೂಜೆಯನ್ನು ಕೊರೋನಾ ಕೋವಿಡ್-19 ಹಿನ್ನೆಲೆ ಇಂದು ಸರಳವಾಗಿ ನಡೆಯಿತು.

ಜಿಲ್ಲಾಡಳಿತ ಮತ್ತು ಧಾರ್ಮಿಕ ಧತ್ತಿ ಇಲಾಖೆಯ ಸೂಚನೆಯಂತೆ ಗೊನೆ ಪೂಜೆಯನ್ನು ಸರಳವಾಗಿ ನೆರವೇರಿಸಲಾಯಿತು. ದೇವಳದ ಎದುರು ಭಾಗದ ಎಡಭಾಗದಲ್ಲಿರುವ ಕಂಬಳಕೋಡಿ ಮೋನಪ್ಪ ಸಪಲ್ಯರವರ ಮನೆಯ ತೋಟದಿಂದ ಗೊನೆಗೆ ಪೂಜೆ ನೆರವೇರಿಸಿ ಮುಹೂರ್ತ ಮಾಡಲಾಯಿತು.

ದೇವಳದ ಪ್ರಧಾನ ಅರ್ಚಕ ವಿ.ಎಸ್. ಭಟ್‌ರವರು ಗೊನೆ ಮುಹೂರ್ತ ನಡೆಸಿಕೊಟ್ಟರು. ಪ್ರಧಾನ ಅರ್ಚಕ ವಸಂತ ಕುಮಾರ್ ಕೆದಿಲಾಯ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು ಸೇರಿದಂತೆ ಸೀಮಿತ ಅರ್ಚಕ, ಸಿಬಂದಿ, ಭಕ್ತರು ಪಾಲ್ಗೊಂಡಿದ್ದರು.