Connect with us

LATEST NEWS

ದೇಯಿಬೈದೇತಿಗೆ ಅವಮಾನ, ಬೃಹತ್ ಪಾದಯಾತ್ರೆಗೆ ಚಾಲನೆ 

ದೇಯಿಬೈದೇತಿಗೆ ಅವಮಾನ, ಬೃಹತ್ ಪಾದಯಾತ್ರೆಗೆ ಚಾಲನೆ 

ಪುತ್ತೂರು, ಆಕ್ಟೋಬರ್ 10 : ಕೋಟಿ ಚೆನ್ನಯ್ಯರ ತಾಯಿ ದೇಯಿಬೈದೇತಿ ಅವರ ವಿಗ್ರಹವನ್ನು ಅವಮಾನಿಸಿ ಹಿಂದೂ ಸಮಾಜದ ಭಕ್ತರ ಭಾವನೆಗೆ ವಿರುದ್ಧವಾಗಿ ವರ್ತಿಸಿದ ಮತಾಂಧ ವ್ಯಕ್ತಿಗಳ ವಿರುದ್ಧ ಮತ್ತು ಜಿಲ್ಲೆಯ ಶಕ್ತಿ ಕೇಂದ್ರಗಳ ರಕ್ಷಣೆಗಾಗಿ ನಡೆಸಲು ಉದ್ದೇಶಿಸಿರುವ ಬೃಹತ್ ಪಾದಯಾತ್ರೆ ಆರಂಭಗೊಂಡಿದೆ.

ಪಾದಯಾತ್ರೆಗೂ ಮುನ್ನ ಸಂಸದ ನಳಿನ್ ಕುಮಾರ್ ಕಟೀಲ್ ಶ್ರೀ ಮಹಾಲಿಂಗೇಶ್ವರ ದೇವರಿಗೆ ಹಾಗೂ ನಾರಾಯಣ ಗುರು ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿ ಬೃಹತ್ ಪಾದಯಾತ್ರೆಗೆ ಚಾಲನೆ ನೀಡಿದರು. ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಗದ್ದೆಯಿಂದ ದೇಯಿ ಬೈದೇತಿ ಔಷದವನದ ತನಕ ನಡೆಯಲಿರುವುದು.

ತುಳುನಾಡಿನ ವೀರ ಪುರುಷರು, ದೈವಾಂಶ ಸಂಭೂತರಾದ, ಕೋಟಿ ಚೆನ್ನಯ್ಯರ ತಾಯಿ, ಮಹಾಮಾತೆ ದೇಯಿಬೈದೇತಿ ಅವರ ವಿಗ್ರಹವನ್ನು ಅವಮಾನಿಸಿರುದನ್ನು ಖಂಡಿಸಿ ಈ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರ ನೇತೃತ್ವದಲ್ಲಿ ಸಾವಿರಾರು ಭಕ್ತರು ಈ ಬೃಹತ್ ಪಾದ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.                ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜೀವ ಮಠಂದೂರು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಸಹಿತ ಅನೇಕ ಸ್ಥಳೀಯ ರಾಜಕೀಯ ಮುಖಂಡರುಗಳು, ಧಾರ್ಮಿಕ ನಾಯಕರುಗಳು ಉಪಸ್ಥಿತರಿದ್ದರು.