DAKSHINA KANNADA
ಪುತ್ತೂರು: ಹಾಡಹಗಲೇ ಯುವತಿಗೆ ಇರಿದು ಯುವಕ ಪರಾರಿ!

ಪುತ್ತೂರು, ಆಗಸ್ಟ್ 24: ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಯುವತಿಯ ಕತ್ತು ಸೀಳಿ ಪರಾರಿಯಾದ ಘಟನೆ ವರದಿಯಾಗಿದೆ.
ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಪಕ್ಕದಲ್ಲೇ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಮೂರರಿಂದ ನಾಲ್ಕು ಭಾರೀ ಯುವತಿಯ ಕತ್ತುಗೆ ಸೀಳಿದ್ದಾನೆ. ಸಂತ್ರಸ್ತ ಯುವತಿಯನ್ನು ಗೌರಿ ಎಂದು ಗುರುತಿಸಲಾಗಿದೆ.

ಸಂತ್ರಸ್ತ ಯುವತಿಗೆ ಗಂಭೀರ ಸ್ಬರೂಪದ ಗಾಯವಾಗಿದ್ದುಚಿಂತಾಜನಕ ಸ್ಥಿತಿಯಲ್ಲಿರುವ ಯುವತಿ ಗೌರಿಯನ್ನ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಸ್ಥಳಕ್ಕೆ ಪೋಲಿಸರು ಬೇಟಿ ನೀಡಿ ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೆ ದೊರೆಯ ಬೇಕಿದೆ.