Connect with us

    DAKSHINA KANNADA

    ಡಿಸೆಂಬರ್ 24 ಮತ್ತು 25 ರಂದು ಪುತ್ತಿಲ ಪರಿವಾರದ ಶ್ರೀನಿವಾಸ ಕಲ್ಯಾಣೋತ್ಸವ

    ಪುತ್ತೂರು ಡಿಸೆಂಬರ್ 23: ಪುತ್ತಿಲ ಪರಿವಾರ ಪುತ್ತೂರು ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಹಯೋಗದಲ್ಲಿ ಡಿಸೆಂಬರ್ 24 ಮತ್ತು 25 ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ ಎಂದು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ಸುರೇಶ್ ಪುತ್ತೂರಾಯ ತಿಳಿಸಿದರು.

    ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಡಿಸೆಂಬರ್ 24 ಆದಿತ್ಯವಾರ ಬೆಳಗ್ಗೆ 6.30 ರಿಂದ ಭಜನೆ ಮೂಲಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಸಂಜೆ 4 ಗಂಟೆಗೆ ಪುಷ್ಪವೃಷ್ಠಿ, ವಿದ್ವಾಂಸರ ವೇದಪಠಣ, ಶಂಖನಾದ,ಚೆಂಡೆವಾದ್ಯಗಳ ಘೋಷದೊಂದಿಗೆ ಬೊಳುವಾರಿನಿಂದ ಶ್ರೀ ದೇವರ ಭವ್ಯ ಶೋಭಾಯಾತ್ರೆ ನಡೆಯಲಿದೆ.


    ಸಂಜೆ 5.30 ಕ್ಕೆ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಸನಾತನ ಸಮಾಗಮ ಮತ್ತು ಸಂಜೆ 7.30 ರಿಂದ ರಾಜ್ಯದ ಪ್ರತಿಷ್ಠಿತ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು. ಡಿ.25 ರ ಬೆಳಿಗ್ಗೆ 6 ಗಂಟೆಗೆ ಸುಪ್ರಭಾತ ಪೂಜೆ ಪ್ರಾರಂಭಗೊಳಲಿದ್ದು, ಮಧ್ಯಾಹ್ನ ಭಜನೋತ್ಸವ ನಡೆಯಲಿದೆ. ಸಂಜೆ 6 ಗಂಟೆಯಿಂದ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಸಂಖ್ಯೆಯ ಭಕ್ತಾಧಿಗಳು ಭಾಗಿಯಾಗಲಿದ್ದು, ಈಗಾಗಲೇ 50 ಸಾವಿರ ಪ್ರಸಾದಕ್ಕೆ ಸಿದ್ಧತೆ ಮಾಡಲಾಗಿದೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply