Connect with us

    LATEST NEWS

    ನಾಳೆ ಎರಡನೇ ಮದುವೆಯಾಗಲಿರುವ ಪಂಜಾಬ್ ಸಿಎಂ ಭಗವಂತ್ ಮಾನ್

    ಚಂಡೀಗಡ, ಜುಲೈ 06: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ನಾಳೆ ಎರಡನೇ ವಿವಾಹವಾಗುತ್ತಿದ್ದಾರೆ. ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಚಂಡೀಗಡದ ತಮ್ಮ ನಿವಾಸದಲ್ಲಿ ಅವರು, ವೈದ್ಯೆ. ಗುರುಪ್ರೀತ್ ಕೌರ್ ಅವರ ಕೈಹಿಡಿಯಲಿದ್ದಾರೆ.

    ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಸುಮಾರು 6 ವರ್ಷಗಳ ಹಿಂದೆ ಮಾನ್ ತಮ್ಮ ಮೊದಲ ಪತ್ನಿಯಿಂದ ವಿಚ್ಚೇದನ ಪಡೆದಿದ್ದರು. ಮಾನ್ ಅವರ ಮೊದಲ ಪತ್ನಿ ಮತ್ತು ಇಬ್ಬರು ಮಕ್ಕಳು ಅಮೆರಿಕ ವಾಸವಿದ್ದಾರೆ.

    ಇಬ್ಬರೂ ಮಕ್ಕಳು ತಮ್ಮ ತಂದೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ ಸಮಾರಂಭಕ್ಕೆ ಆಗಮಿಸಿದ್ದರು. ಭಗವಂತ್ ಮಾನ್ ಅವರ ತಾಯಿ ಮತ್ತು ಸಹೋದರಿ, ವಧುವನ್ನು ಆಯ್ಕೆ ಮಾಡಿದ್ದಾರೆ ಎಂದು ವರದಿಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply